ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಬಿಸಿಲು-ಮಳೆಯ ಆಟ ಜೋರಾಗಿದ್ದು, ಭಾನುವಾರ ಸಂಜೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ಈ ಮಳೆ ತಂಪೆರೆದಿದ್ದು, ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಇಂದು ಬೆಳಗ್ಗೆ 7 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರ, ಸೊರಬ, ಶಿಕಾರಿಪುರ ಹಾಗೂ ಸಾಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ದಾಖಲಾದ ಪ್ರಮುಖ ಮಳೆಯ ವಿವರ ಇಲ್ಲಿದೆ.
| ತಾಲೂಕು | ಗ್ರಾ.ಪಂ. | ಮಳೆ ಪ್ರಮಾಣ (ಮಿ.ಮೀ.ಗಳಲ್ಲಿ) |
| ಹೊಸನಗರ | ಹರಿದ್ರಾವತಿ | 42.75 |
| ಸೊರಬ | ಇಂಡುವಳ್ಳಿ | 35.5 |
| ಶಿಕಾರಿಪುರ | ತಾಳಗುಂದ | 33.5 |
| ಶಿಕಾರಿಪುರ | ತಡಗಣಿ | 24.0 |
| ಸಾಗರ | ಹಿರೇಬಿಲಗುಂಜಿ | 24 |
| ಸೊರಬ | ಚಿತ್ತೂರು | 22.5 |
| ಸಾಗರ | ತ್ಯಾಗರ್ತಿ | 21.5 |
| ಸೊರಬ | ಉಳವಿ_1 | 20.4 |
ಕೃಷಿ ಚಟುವಟಿಕೆಗೆ ವರದಾನ:
ಕಳೆದ ಕೆಲವು ದಿನಗಳಿಂದ ಹೆಚ್ಚಾಗಿದ್ದ ತಾಪಮಾನದಿಂದ ಜನ ಹೈರಾಣಾಗಿದ್ದರು. ಇದೀಗ ಸುರಿದ ಮಳೆಯಿಂದಾಗಿ ವಾತಾವರಣ ಸಂಪೂರ್ಣ ತಂಪಾಗಿದೆ. ಅದರಲ್ಲೂ ಪ್ರಮುಖವಾಗಿ ಕೃಷಿ ಭೂಮಿಗೆ ಈ ಮಳೆ ವರದಾನವಾಗಿದ್ದು, ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ.
ಇಂದಿನ ಹವಾಮಾನ ಮುನ್ಸೂಚನೆ ಏನು?
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇಂದೂ ಕೂಡ ಮೋಡ ಕವಿದ ವಾತಾವರಣ ಮುಂದುವರಿದಿದೆ. ಹವಾಮಾನ ಇಲಾಖೆಯ ಪ್ರಕಾರ, ಜಿಲ್ಲೆಯ ಹಲವೆಡೆ ಇಂದು ಆಗಾಗ್ಗೆ ತುಂತುರು ಹಾಗೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

