Chikmagaluru News

ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ?

SHIVAMOGGA / CHIKKAMAGALURU : ಮಲೆನಾಡಿನಾದ್ಯಂತ ಆರಿದ್ರಾ ಮಳೆ (Rain) ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲಾದ್ಯಂತ ಬಿರುಸಿನ ಮಳೆಯಾಗಿದೆ. ಸೋಮವಾರ ಹಗಲು ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ರಾತ್ರಿಯಿಡಿ ಬಿಟ್ಟು ಬಿಡದೆ ಮಳೆ ಸುರಿದಿದೆ.

WhatsApp Group Join Now
Telegram Group Join Now
Instagram Group Join Now

ಮಳೆ ಬಿರುಸುಗೊಂಡಿದ್ದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಜಮೀನುಗಳತ್ತ ರೈತರು ಮುಖ ಮಾಡುತ್ತಿದ್ದಾರೆ. ಬತ್ತಿದ್ದ ಹಳ್ಳ-ಕೊಳ್ಳಗಳಲ್ಲಿ ನೀರು ಹರಿಯಲಾರಂಭಿಸಿದೆ. ಕೆರೆ-ಕಟ್ಟೆಗಳಲ್ಲಿ ನೀರಿನ ಪ್ರಮಾಣ ಏರ ತೊಡಗಿದೆ‌.

Read More:LED Bulb | ಎಲ್‌ಇಡಿ ಹೆಡ್‌ಲೈಟ್ ಅಳವಡಿಸಿಕೊಂಡ ವಾಹನಗಳ ಮಾಲೀಕರೇ ದಂಡ ಕಟ್ಟಲು ಸಜ್ಜಾಗಿ !

ಇನ್ನೂ ಎರಡು ದಿನ (ಜೂ.26&27) ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸುರಿದ ಮಳೆ ವಿವರ ಇಲ್ಲಿ ನೀಡಲಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ?

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ. ಗಳಲ್ಲಿ) :

  1. ಶಾನುವಳ್ಳಿ (ಕೊಪ್ಪ) : 62
  2. ಕೊಪ್ಪ ಗ್ರಾಮೀಣ (ಕೊಪ್ಪ) : 53.5
  3. ಸೀತೂರು (ಎನ್‌.ಆರ್.ಪುರ) : 52.5
  4. ಬೇಗಾರು (ಶೃಂಗೇರಿ) : 52
  5. ಬಿಂತ್ರವಳ್ಳಿ (ಶೃಂಗೇರಿ) : 49
  6. ನಿಲುವಾಗಿಲು (ಕೊಪ್ಪ) : 46
  7. ಬಣಕಲ್ (ಮೂಡಿಗೆರೆ) : 44.5
  8. ಬೆಟ್ಟಗೆರೆ (ಮೂಡಿಗೆರೆ) : 34.5
  9. ಧರೆಕೊಪ್ಪ (ಶೃಂಗೇರಿ) : 27.5
  10. ಫಲ್ಗುಣಿ (ಮೂಡಿಗೆರೆ) : 25.5

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :

  1. ಬಿದರಗೋಡು (ತೀರ್ಥಹಳ್ಳಿ) : 57
  2. ಮೇಲಿನಬೆಸಿಗೆ (ಹೊಸನಗರ) : 49.5
  3. ನೊಣಬೂರು (ತೀರ್ಥಹಳ್ಳಿ) : 48.5
  4. ಸೊನಲೆ (ಹೊಸನಗರ) : 46
  5. ಹೊಸೂರು-ಸಂಪೆಕಟ್ಟೆ (ಹೊಸನಗರ) : 43
  6. ಮುಂಬಾರು (ಹೊಸನಗರ) : 32
  7. ಹಾದಿಗಲ್ಲು (ತೀರ್ಥಹಳ್ಳಿ) : 29
  8. ಆರಗ (ತೀರ್ಥಹಳ್ಳಿ) : 28.5
  9. ಬಾಂಡ್ಯ-ಕುಕ್ಕೆ (ತೀರ್ಥಹಳ್ಳಿ) : 27
  10. ಅಮೃತ – ಗರ್ತಿಕೆರೆ (ಹೊಸನಗರ) : 24

Read More:ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ರಿಜಿಸ್ಟರ್ ಆಗಿದೆ? ಈ ರೀತಿ ಚೆಕ್ ಮಾಡಿ, ಅಪಾಯದಿಂದ ಪಾರಾಗಿ!

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!