ನಮ್ಮಲ್ಲಿ ಎಲ್ಲರ ಬಳಿ ಕೂಡ ಮೊಬೈಲ್ ಫೋನ್, ಅದಕ್ಕೊಂದು ಸಿಮ್ ಕಾರ್ಡ್ ಇದ್ದೇ ಇರುತ್ತದೆ. ಸಿಮ್ ಕಾರ್ಡ್ ಇಂದಲೇ ನಾವು ಮತ್ತೊಬ್ಬರ ಜೊತೆಗೆ ಸಂಪರ್ಕ ಮಾಡಲು ಸಾಧ್ಯವಾಗುತ್ತದೆ. ಆದರೆ ಕೆಲ ದಿನಗಳ ಹಿಂದೆ ಸರ್ಕಾರವು ಸಿಮ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದ ಹಾಗೆ ಹೊಸ ನಿಯಮವನ್ನು ಜಾರಿಗೆ ತಂದಿತು. ಅದು ಏನು ಎಂದರೆ, ಒಂದು ಆಧಾರ್ ಕಾರ್ಡ್ ನಲ್ಲಿ ಅಥವಾ ಒಬ್ಬ ವ್ಯಕ್ತಿಯ ಹೆಸರಲ್ಲಿ ಜಾಸ್ತಿ ಸಿಮ್ ಕಾರ್ಡ್ ಗಳು ಇರುವ ಹಾಗಿಲ್ಲ ಎಂದು ತಿಳಿಸಿತು..
Read More:PMSY :ಮನೆಗೆ ಉಚಿತವಾಗಿ ಸೋಲಾರ್ ಹಾಕಿಸಬೇಕೆ? ಸೂರ್ಯ ಘರ್ ಯೋಜನೆಗೆ ಅರ್ಜಿ ಇಂದೇ ಸಲ್ಲಿಸಿ
ಹೆಚ್ಚಿನ ಸಿಮ್ ಕಾರ್ಡ್ ಗಳು ಒಂದೇ ಆಧಾರ್ ಕಾರ್ಡ್ ಇಂದ ಖರೀದಿ ಆಗಿದ್ದರೆ, ಅಂಥವರ ಸಿಮ್ ಕಾರ್ಡ್ ಗಳನ್ನು ಬ್ಲಾಕ್ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಈ ರೀತಿಯ ಕಡ್ಡಾಯದ ನಿಯಮಗಳು ಇರುವಾಗ, ನಿಮ್ಮ ಸೇಫ್ಟಿಗಾಗಿ ನೀವು ನಿಮ್ಮ ಆಧಾರ್ ಕಾರ್ಡ್ ಬಳಸಿ ಎಷ್ಟು ಸಿಮ್ ಖರೀದಿ ಆಗಿದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗೆಯೇ ಆ ನಂಬರ್ ಅನ್ನು ಕೂಡ ಬ್ಲಾಕ್ ಮಾಡಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಕಾರ್ಡ್ ಖರೀದಿ ಆಗಿದೆ ಎಂದು ತಿಳಿಯಲು, ಮೊದಲಿಗೆ ನೀವು ಸರ್ಕಾರದ, ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ ವೆಬ್ಸೈಟ್ ಗೆ ಭೇಟಿ ನೀಡಬೇಕು. ಈ ವೆಬ್ಸೈಟ್ ನಲ್ಲಿ ನಿಮ್ಮ ಫೋನ್ ನಂಬರ್ ಹಾಕಿ, ಅಲ್ಲಿ ಬರುವ ಕ್ಯಾಪ್ಚ ಕೋಡ್ ಹಾಕಿ, ಲಾಗಿನ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಆಗ ನಿಮ್ಮ ಫೋನ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಇದನ್ನು ಎಂಟರ್ ಮಾಡಿ, ಲಾಗಿನ್ ಆಗಬೇಕು.
ಈಗ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ರಿಜಿಸ್ಟರ್ ಆಗಿದೆ ಎನ್ನುವುದರ ಲಿಸ್ಟ್ ಬರುತ್ತದೆ. ಒಂದು ವೇಳೆ 10 ಸಿಮ್ ರಿಜಿಸ್ಟರ್ ಆಗಿದ್ದರೆ, 10 ನಂಬರ್ ಬರುತ್ತದೆ. ಅಕಸ್ಮಾತ್ ಯಾವುದಾದರೂ ನಂಬರ್ ನೀವು ಖರೀದಿ ಮಾಡಿಲ್ಲ, ಅಥವಾ ಬೇರೆ ಯಾರೋ ನಿಮ್ಮ ಆಧಾರ್ ಕಾರ್ಡ್ ಬಳಸಿ ಖರೀದಿ ಮಾಡಿದ್ದಾರೆ ಎಂದರೆ, Not My Number ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಈಗ ಆ ನಂಬರ್ ಯಾಕೆ ನಿಮ್ಮ ನಂಬರ್ ಅಲ್ಲ ಎಂದು ಮತ್ತೊಂದು ಪ್ರಶ್ನೆ ಬರುತ್ತದೆ.
ಅದಕ್ಕೆ ಉತ್ತರ ಕೊಟ್ಟು ಮುಂದುವರೆದರೆ, ನೀವು ಖರೀದಿ ಮಾಡಿಲ್ಲದೆ ಇರುವ ಆ ನಿಮ್ಮ ನಂಬರ್ ಬ್ಲಾಕ್ ಆಗುತ್ತದೆ. ಈ ರೀತಿಯಾಗಿ ನಿಮ್ಮದಲ್ಲದ ನಂಬರ್ ಅನ್ನು ನೀವು ಸುಲಭವಾಗಿ ಬ್ಲಾಕ್ ಮಾಡಬಹುದು.
Read More:ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ Farmers FID ಹೀಗೆ ಚೆಕ್ ಮಾಡಿ
ಅವರು MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 2019ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಅವರು ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.