ರಿಪ್ಪನ್‌ಪೇಟೆ ; ರಾಜೇಶ್ ಬಲ್ಲಾಳ್ ನಿಧನ !

Written by Mahesha Hindlemane

Published on:

ರಿಪ್ಪನ್‌ಪೇಟೆ : ಪಟ್ಟಣದ ಉದ್ಯಮಿ ಹಾಗೂ ರೋಟರಿ ಕ್ಲಬ್‌ನ ಕಾರ್ಯದರ್ಶಿ ರವೀಂದ್ರ ಬಲ್ಲಾಳ್ ಅವರ ಸಹೋದರ ರಾಜೇಶ್ ಬಲ್ಲಾಳ್ (60) ಅವರು ಅಲ್ಪಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಹೃದಯಘಾತದಿಂದ ಶನಿವಾರ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಾಜೇಶ್ ಬಲ್ಲಾಳ್ ಅವರು ತುಮಕೂರಿನಲ್ಲಿ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮವನ್ನು ನಡೆಸುತ್ತಿದ್ದರು. ಸಹೃದಯಿ, ಮಿತಭಾಷಿಯಾಗಿದ್ದ ಇವರು ಎಲ್ಲರಿಗೂ ಹಿತೈಷಿಯಾದ್ದರು.

ರಾಜೇಶ್ ಬಲ್ಲಾಳರವರು ಪತ್ನಿ ಮತ್ತು ಓರ್ವ ಪುತ್ರ ಹಾಗೂ ಮೂವರು ಸಹೋದರರು, ಓರ್ವ ಸೋದರಿಯನ್ನು ಅಗಲಿದ್ದಾರೆ.

ರಾಜೇಶ್ ಬಲ್ಲಾಳ್ ರವರ ನಿಧನಕ್ಕೆ ರಿಪ್ಪನ್‌ಪೇಟೆ ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ರಿಪ್ಪನ್‌ಪೇಟೆಯ ರೋಟರಿ ಕ್ಲಬ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಅವರ ಸ್ನೇಹಿತರು ಹಿತೈಷಿಗಳು ಮತ್ತು ಕುಟುಂಬ ವರ್ಗದವರು ಸಂತಾಪ ಸೂಚಿಸಿದ್ದಾರೆ.

Leave a Comment