HOSANAGARA | ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯ ಹೆಬ್ಬಿಗೆ, ಬರುವೆ ಸಂಪರ್ಕಿಸುವ ಕಲ್ಯಾಣಿ ಚೌಕ ರಸ್ತೆ ನಿರಂತರ ಮಳೆಯಿಂದ ಕೆಸರು ಗದ್ದೆಯಂತಾಗಿದ್ದು, ಗ್ರಾಮಾಡಳಿತ ಈ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಕಲ್ಯಾಣಿ ಚೌಕ ಗ್ರಾಮಸ್ಥರೇ ರಸ್ತೆಗೆ ಕಲ್ಲು ತಂದು ಹಾಕಿ ರಿಪೇರಿ ಮಾಡಿಕೊಂಡಿದ್ದಾರೆ.
ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸೇರಿದಂತೆ ಪ್ರತೀದಿನ ಕನಿಷ್ಠ 300 ರಿಂದ 400 ಜನ ಓಡಾಡುವ ಕಲ್ಯಾಣಿ ಚೌಕ ರಸ್ತೆಯ 3.5 ಕಿ.ಮೀ. ಗಳಲ್ಲಿ ಕಳೆದ 4 ವರ್ಷಗಳ ಹಿಂದೆ 1.5 ಕಿ.ಮೀ. ಮಾತ್ರ ಸರ್ವ ಋತು ರಸ್ತೆ ಮಾಡಲಾಗಿದ್ದು, ಉಳಿದ 1.5 ಕಿ.ಮೀ. ಕಚ್ಚಾ ರಸ್ತೆಯಾಗಿದ್ದು ಓಡಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಮಳೆಗಾಲದಲ್ಲಂತೂ ಅಕ್ಷರಶಃ ಕೆಸರು ಗದ್ದೆಯಾಗಿ ಓಡಾಟ ನಡೆಸುವವರು ಇನ್ನಿಲ್ಲದ ಪರಿಪಾಟಲು ಅನುಭವಿಸಿವಂತಾಗಿದೆ.
ಶಾಸಕರಿಗೆ ಮತ್ತು ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೆಸತ್ತ ಗ್ರಾಮಸ್ಥರು ತಾವೇ ಸೇರಿ ವಾಹನದಲ್ಲಿ ಕಲ್ಲನ್ನು ತಂದು ಕೆಸರಾದ ಜಾಗಕ್ಕೆ ಹಾಕಿ ಸರಿಪಡಿಸಿಕೊಂಡಿದ್ದಾರೆ.
ಜನ ಓಡಾಟ ನಡೆಸಲು ಸಾಧ್ಯವಾಗದೇ ಪರದಾಡುತ್ತಿದ್ದರೂ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೌನವಾಗಿರುವ ಗ್ರಾಮಡಳಿತಕ್ಕೆ ಛೀಮಾರಿ ಹಾಕಿದ್ದಾರೆ.
ನಿಸರ್ಗಧಾಮ ಮಂಜುನಾಥ ಶಾಸ್ತ್ರಿ, ಕೃಷ್ಣ ಕಲ್ಯಾಣಿಚೌಕ, ಸುಧೀಂದ್ರ ಕಲ್ಯಾಣಿ ಚೌಕ, ನಾಗರಾಜ ಕಲ್ಯಾಣಿ ಚೌಕ, ಇತರರು ಹಾಜರಿದ್ದರು.
Read More
Rain Report | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ & ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ ?
ಅವೈಜ್ಞಾನಿಕ ಪದ್ದತಿಯೋ ಅಥವಾ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರವೋ…!? ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇನಿದು ?