Ripponpete

ನಿವೃತ್ತ ಸೇನಾಧಿಕಾರಿ ಎ.ಕುಮಾರ್‌ಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ

ರಿಪ್ಪನ್‌ಪೇಟೆ ; ಕಳೆದ 36 ವರ್ಷಗಳ ಕಾಲ ದೇಶ ಸೇವೆಗೈದು ನಿವೃತ್ತರಾದ ಎ.ಕುಮಾರ್‌ರವರು ಇಂದು ಹುಟ್ಟೂರಿಗೆ ವಾಪಾಸ್ಸಾಗುತ್ತಿರುವ ಸುಸಂದರ್ಭದಲ್ಲಿ ರಿಪ್ಪನ್‌ಪೇಟೆಯ ನಾಗರೀಕರು ಅದ್ದೂರಿಯಾಗಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿದ್ದರು.

WhatsApp Group Join Now
Telegram Group Join Now
Instagram Group Join Now

ಎ.ಕುಮಾರ್‌ರವರು ಕಳೆದ 36 ವರ್ಷಗಳ ಕಾಲ ದೇಶದ ಗಡಿ ಪ್ರದೇಶಗಳಲ್ಲಿ ತಮ್ಮ ಸೈನಿಕ ವೃತ್ತಿಯ ಮೂಲಕ ಕರ್ತವ್ಯ ನಿರ್ವಹಿಸುವುದರೊಂದಿಗೆ ಪ್ರಾಮಾಣಿಕವಾಗಿ ದೇಶದ ಸೇವೆಯನ್ನು ಮಾಡಿ ತಮ್ಮ ಪತ್ನಿ ಪದ್ಮಾ ಕುಮಾರ್ ಸಹ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.

ಪಕ್ಷಾತೀತವಾಗಿ ಸಾರ್ವಜನಿಕರು ಹುಟ್ಟೂರಿನ ಜನತೆ ಹಾಗೂ ಅಭಿಮಾನಿಗಳು ಸ್ಥಳೀಯ ಪೊಲೀಸ್ ಇಲಾಖೆ, ವಿವಿಧ ಸಂಘ ಸಂಸ್ಥೆಯವರು ಡೊಳ್ಳು ಕಲಾ ತಂಡದ ಮೆರವಣಿಗೆಯೊಂದಿಗೆ ಸಮೀಪದ ಸಿದ್ದಪ್ಪನಗುಡಿಯ ಬಳಿ ತೆರೆದ ವಾಹನದಲ್ಲಿ ನಿವೃತ್ತ ಯೋಧ ಎ.ಕುಮಾರ್ ಮತ್ತು ಆತನ ಪತ್ನಿ ನಿವೃತ್ತ ಯೋಧೆ ಪದ್ಮಾ ಕುಮಾರ್ ಇವರನ್ನು ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿ ಇತಿಹಾಸ ಪ್ರಸಿದ್ದ ಶ್ರೀ ಸಿದ್ದಿವಿನಾಯಕ ದೇವಸ್ಥಾನಕ್ಕೆ ಬಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳು ಮತ್ತು ನಾಗರೀಕರು ನಿವೃತ್ತ ಯೋಧ ಎ.ಕುಮಾರ್ ಕುಟುಂಬದವರಿಗೆ ಹಾರ, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!