Ripponpete

ರಿಪ್ಪನ್‌ಪೇಟೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ | ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ಜಾಗೃತಿ ಅಗತ್ಯ

ರಿಪ್ಪನ್‌ಪೇಟೆ‌ : ಮನುಷ್ಯನಲ್ಲಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬದುಕುವುದೇ ನಿಜವಾದ ಮನುಷ್ಯ ಧರ್ಮ. ನಾವು ಯಾವುದೇ ರೂಪದಲ್ಲಿಯಾದರೂ ಒಂದಲ್ಲಾ ಒಂದು ಸಹಾಯ ಮಾಡುತ್ತೇವೆ. ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ನೀಡುವುದು ಒಂದು ಸೇವೆಯಾಗಿದೆ ಈ ಸೇವೆಯಲ್ಲಿ ತೃಪ್ತಿಕಂಡ ಎಷ್ಟು ಬಡವರು ನಮಗೆ ಗೊತ್ತಿಲ್ಲದಂತೆ ಪ್ರಗತಿ ಹೊಂದಿರುತ್ತಾರೆ ಅದೇ ನಿಸ್ವಾರ್ಥ ಸೇವೆಯೆಂಬ ರೋಟರಿ ಧ್ಯೇಯವಾಗಿದೆ ಎಂದು ಜಿಲ್ಲಾ ಎಲೆಕ್ಟ್ ಗವರ್ನರ್ ರೊ. ವಸಂತ ಹೋಬಳಿದಾರ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ರೋಟರಿ ಕ್ಲಬ್ ಇವರ 2026-27ನೇ ಸಾಲಿನ ಪದಗ್ರಹಣ ಸಮಾರಂಭ ಹಾಗೂ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿ ಮಾತನಾಡಿ, ರೋಟರಿ ಸೇವೆಯೇ ಶ್ರೇಷ್ಟ ಎಂಬ ಧ್ಯೇಯ ವಾಕ್ಯವನ್ನು ಸ್ಮರಿಸಿದ ಅವರು, ಸೇವೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ಮಾಡಲು ಸಾಧ್ಯವಾಗಿದೆ ಎಂದರು.

2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರೊ.ರವೀಂದ್ರ ಬಲ್ಲಾಳ ಕೆ. ಹಾಗೂ ಕಾರ್ಯದರ್ಶಿಯಾಗಿ ರೊ.ರಮೇಶ್‌ಹೆಬ್ಬಾರ್ (ರಾಮು) ಅಧಿಕಾರ ಸ್ವೀಕರಿಸಿದರು.

ಅಸಿಸ್ಟೆಂಟ್ ಗವರ್ನರ್ ರೊ. ಪಿಹೆಚ್‌ಎಫ್ ನಾಗರಾಜ್ ಎಸ್, ಝೋನಲ್ ಲೆಪ್ಟಿನೆಂಟ್ ರೊ.ವಿಷ್ಣುಮೂರ್ತಿ ಎಸ್.ಎಂ.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಕ್ಲಬ್ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಗ್ಲೋಬಲ್ ಗ್ರಾಂಟ್ ಪಡೆದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ದಿಯೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡುವ ಚಿಂತನೆ ನಡೆಸಲಾಗಿದೆ. ಈ ವರ್ಷದಲ್ಲಿ ದೇಶದಲ್ಲಿ ರಸ್ತೆ ಸುರಕ್ಷತೆ. ಪರಿಸರ ಸ್ವಚ್ಚತೆ. ಸೇರಿದಂತೆ ಇನ್ನಿತರ ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗುವುದೆಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಆಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರೋಟರಿ ಕ್ಲಬ್ ಆಯೋಜಿಸುವ ರಕ್ತದಾನ ಮತ್ತು ತಪಾಸಣಾ ಶಿಬಿರದಲ್ಲಿ ಶ್ರಮಿಸಿದ ಆಶಾ ಕಾರ್ಯಕರ್ತೆಯರಾದ ಪದ್ಮಾ, ನಗೀನಾ ಮತ್ತು ನಾಗವೇಣಿ ಇವರ ಸೇವಾ ಕಾರ್ಯಪ್ರಖರತೆಯನ್ನು ಗುರುತಿಸಿ ಗೌರವಿಸಲಾಯಿತು.

ಸಾಗರದ ಡಾ.ರಾಜಾನಂದಿನಿ ಕಾಗೋಡು, ರೋಟರಿ ಕ್ಲಬ್ ಸಂಸ್ಥಾಪಕ ಆಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ, ಗಣೇಶ್ ಕಾಮತ್, ಜೆ.ರಾಧಾಕೃಷ್ಣ, ಡಾಕಪ್ಪ, ನಿ.ಮುಖ್ಯ ಶಿಕ್ಷಕ ರಾಧಾಕೃಷ್ಣ ಆರ್, ಎಂ.ಬಿ.ಮಂಜುನಾಥ, ಸಬಾಸ್ಟಿನ್ ಮಾಥ್ಯೂಸ್, ಶಿವಕುಮಾರ್‌ಶೆಟ್ಟಿ, ಪ್ರಮೀಳಾ ಎಂ.ಬಿ.ಗೌಡ, ಪ್ರವೀಣೆ ಮಂಜುನಾಥ, ಅಮೃತ್ ರಮೇಶ್, ಅಮೀತ್ ರವೀಂದ್ರ ಬಲ್ಲಾಳ್, ಸಂದ್ಯಾ ಜಿ.ಕಾಮತ್, ದೀಪಾ ಸುಧೀಂದ್ರ ಹೆಬ್ಬಾರ್, ಹೆಚ್.ಎಂ.ವರ್ತೇಶ್‌ಗೌಡ ಹಾಗೂ ಇನ್ನಿತರರು ರೋಟರಿ ಕ್ಲಬ್ ಪದಾಧಿಕಾರಿಗಳು ಹಾಜರಿದ್ದರು.

ಕೃಷ್ಣರಾಜ್ ಸ್ವಾಗತಿಸಿದರು. ಸಬಾಸ್ಟೀನ್ ಮಾಥ್ಯೂಸ್ ಮತ್ತು ಎಂ.ಬಿ.ಮಂಜುನಾಥ ನಿರೂಪಿಸಿದರು. ರಮೇಶ್ ಹೆಬ್ಬಾರ್ ವಂದಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>