ಹೊಸನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ರಿಪ್ಪನ್‌ಪೇಟೆ ವರ್ತೇಶ್ ಮರು ಆಯ್ಕೆ

Written by Mahesha Hindlemane

Updated on:

ಹೊಸನಗರ ; ಹೊಸನಗರ ತಾಲ್ಲೂಕು ಜೆಡಿಎಸ್ (ಜನತಾದಳ) ಪಕ್ಷದ ತಾಲ್ಲೂಕು ಅಧ್ಯಕ್ಷರಾಗಿ ಮೂರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ ರಿಪ್ಪನ್‌ಪೇಟೆ ವರ್ತೆಶ್‌ರನ್ನು ಮರು ಆಯ್ಕೆಗೊಳಿಸಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಆದೇಶಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ವೇಳೆ ಮಾತನಾಡಿದ ರಿಪ್ಪನ್‌ಪೇಟೆ ವರ್ತೆಶ್‌, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದಾಗಿನಿಂದ ಹೊಸನಗರ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ ಅದರ ಜೊತೆಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಇನ್ನಷ್ಟು ಬಲಗೊಂಡಿದ್ದು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದಾರೆ ಮುಂದಿನ ಗ್ರಾಮ ಪಂಚಾಯತಿ ತಾಲ್ಲೂಕು ಪಂಚಾಯತಿ ಜಿಲ್ಲಾ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯತಿಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಇನ್ನಷ್ಟು ಕಾರ್ಯಕರ್ತರು ಪಕ್ಷದ ಸೇರಿಕೊಳ್ಳುವುದರ ಜೊತೆಗೆ ತಾಲ್ಲೂಕಿನಲ್ಲಿ ಬಲಷ್ಠವಾಗಿ ಆಡಳಿತ ನಡೆಸುವ ಪಕ್ಷ ಜೆಡಿಎಸ್ ಆಗಲಿದೆ ಎಂದರು.

ಅಭಿನಂದನೆ :

ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲು ಸಹಕರಿಸಿದ ಜಿಲ್ಲಾಧ್ಯಕ್ಷ ರಾಮಕೃಷ್ಣರಿಗೆ ತಾಲ್ಲೂಕಿನ ಹಿರಿಯರಾದ ಎಂ.ವಿ ಜಯರಾಮ್, ಜಬಗೋಡು ಹಾಲಪ್ಪಗೌಡ, ಜೆಡಿಎಸ್ ಪಕ್ಷದ ಹಿರಿಯರು ಪ್ರಧಾನ ಕಾರ್ಯದರ್ಶಿ ಚಾಬುಸಾಬ್, ಸುಮತಿ ಪೂಜಾರ್ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಅಭಿನಂದಿಸಿದರು.

Leave a Comment