ಗಣೇಶ ವಿಸರ್ಜನೆಗೆ ಸಜ್ಜಾದ ರಿಪ್ಪನ್‌ಪೇಟೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನೆ ಸಮಿತಿಯ 58ನೇ ವರ್ಷದ ಗಣಪತಿಯ ರಾಜಬೀದಿ ಉತ್ಸವದ ಸಡಗರಕ್ಕೆ ರಿಪ್ಪನ್‌ಪೇಟೆ ಸಜ್ಜಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸೆಪ್ಟೆಂಬರ್ 6 ರಂದು ಭವ್ಯವಾಗಿ ನಡೆಯಲಿರುವ ಉತ್ಸವಕ್ಕಾಗಿ ಪಟ್ಟಣದ ಮುಖ್ಯರಸ್ತೆ, ವಿನಾಯಕ ವೃತ್ತ ಹಾಗೂ ಅನೇಕ ಬೀದಿಗಳು ಕೇಸರಿಮಯ ತೋರಣ, ಮಾವಿನ ತೋರಣ ಮತ್ತು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.

ಈ ಬಾರಿ ಕೂಡ ವಿನಾಯಕ ವೃತ್ತದಲ್ಲಿ ಓಂ ಚಿಹ್ನೆಯ ಮಹಾದ್ವಾರ ನಿರ್ಮಾಣಗೊಂಡಿದ್ದು, ರಾತ್ರಿಯ ವೇಳೆ ಬಣ್ಣಬಣ್ಣದ ದೀಪಾಲಂಕಾರವು ಜನರನ್ನು ಆಕರ್ಷಿಸುತ್ತಿದೆ.

ಉತ್ಸವ ಕಾರ್ಯಕ್ರಮ ;

ಶನಿವಾರ ಮಧ್ಯಾಹ್ನ 12.30ಕ್ಕೆ ಶ್ರೀಸ್ವಾಮಿಯ ವಿಸರ್ಜನಾ ಪೂಜೆ ನೆರವೇರಿದ ಬಳಿಕ ಮಧ್ಯಾಹ್ನ 3 ಗಂಟೆಗೆ ರಾಜಬೀದಿ ಉತ್ಸವದ ಮೆರವಣಿಗೆ ಪ್ರಾರಂಭವಾಗಲಿದೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಸುದೀರ್ ಪಿ ಹಾಗೂ ಕಾರ್ಯದರ್ಶಿ ಮುರುಳಿಧರ ಕೆರೆಹಳ್ಳಿ ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಕೇರಳದ ನವಿಲು ನೃತ್ಯ, ಶಿರಸಿಯ ಬೇಡರ ನೃತ್ಯ, ಭದ್ರಾವತಿಯ ಅರಕೆರೆಯ ವೀರಗಾಸೆ, ಶಿಗ್ಗಾಂವಿನ ಜಾಂಜಾ ಪಥಾಕ್, ಕೀಲುಕುದುರೆ ಗೊಂಬೆ ಕುಣಿತ, ನಗಾರಿ-ಡೊಳ್ಳು, ತಟ್ಟಿರಾಯ ತಂಡಗಳಂತಹ ವೈವಿಧ್ಯಮಯ ಜಾನಪದ ಕಲೆಗಳು ರಂಗು ಹಚ್ಚಲಿವೆ.

ರಾತ್ರಿ 10.30ಕ್ಕೆ ವಿನಾಯಕ ವೃತ್ತದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಸರಗಮ್ ಮ್ಯೂಸಿಕಲ್ ತಂಡ ಸಂಗೀತ ಕಚೇರಿಯಿಂದ ಜನಮನ ರಂಜಿಸಲಿವೆ.

ಈ ಉತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸುವ ಭಕ್ತಾದಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 15 ರಿಂದ 20 ಸಾವಿರ ಜನರು ಸೇರುವ ನಿರೀಕ್ಷೆ ಇದೆ

ಸನಾತನ ಧರ್ಮ ಪ್ರಚಾರ ;

ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಸನಾತನ ಧರ್ಮ ಪ್ರಚಾರದ ಅಂಗವಾಗಿ ಧಾರ್ಮಿಕ ಪುಸ್ತಕಗಳು ಹಾಗೂ ಪೂಜಾ ಸಾಮಗ್ರಿಗಳ ಪ್ರದರ್ಶನ-ಮಾರಾಟ ಜರುಗುತ್ತಿದೆ.

ಪೊಲೀಸ್ ಭದ್ರತೆ ;

ಉತ್ಸವಕ್ಕಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ತೀರ್ಥಹಳ್ಳಿ ಡಿವೈಎಸ್‌ಪಿ ಅವರ ನೇತೃತ್ವದಲ್ಲಿ 2 ಸರ್ಕಲ್ ಇನ್ಸ್‌ಪೆಕ್ಟರ್, 7 ಪಿಎಸ್‌ಐ, 18 ಎಎಸ್‌ಐ, 80 ಹೆಡ್‌ಕಾನ್ಸ್‌ಟೇಬಲ್ ಹಾಗೂ ಪೊಲೀಸ್ ಸಿಬ್ಬಂದಿ, 103 ಗೃಹರಕ್ಷಕರು, ಜೊತೆಗೆ 1 ಕೆಎಸ್‌ಆರ್‌ಪಿ ಮತ್ತು 1 ಡಿ.ಆರ್ ವಾಹನ ನಿಯೋಜನೆಗೊಂಡಿದೆ.

Leave a Comment