Hosanagara

ಕೊಡಚಾದ್ರಿಯಲ್ಲಿ ನೆಲೆನಿಂತ ಅಮ್ಮನಿಗೆ ವಿಶೇಷ ಪೂಜೆ ; ದೀಪ ಪ್ರಜ್ವಲನಾ ಆರಾಧನೆ

ಹೊಸನಗರ : ತಾಲ್ಲೂಕಿನ ಕೊಡಚಾದ್ರಿ ಗಿರಿಯಲ್ಲಿ ನೆಲೆಸಿರುವ ಶ್ರೀ ಮೂಕಾಂಬಿಕಾ ದೇವಿ ಮೂಲ ಸನ್ನಿಧಿಯಾದ ಅಮ್ಮನವರು ಮತ್ತು ಕಾಲಭೈರವ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳು ಮತ್ತು ದೀಪ ಪ್ರಜ್ವಲನಗೆ ನಡೆಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇತಿಹಾಸ ಪ್ರಸಿದ್ಧ ಕೊಡಚಾದ್ರಿ ಪರ್ವತದಲ್ಲಿ ನೆಲೆ ನಿಂತು ಸುತ್ತ ಹತ್ತೂರ ಸಮಸ್ತರನ್ನು ಸಲಹುತ್ತಿರುವ ಅಮ್ಮನವರು ಮತ್ತು ಕಾಲಭೈರವ ದೇವಸ್ಥಾನದಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರದವರೆಗೆ ಶಿವರಾತ್ರಿಯ ಆಚರಣೆಯ ಧಾರ್ಮಿಕ ವಿಧಿವಿಧಾನಗಳು ನಡೆದವು. ಗ್ರಾಮಸ್ಥರು ಪರಂಪರಾನುಗತವಾಗಿ ನಂಬಿಕೊಂಡು ಬಂದಿರುವ ಶಿವರಾತ್ರಿಯಲ್ಲಿನ ಬಹು ವಿಶಿಷ್ಟ ಮತ್ತು ಅಪರೂಪದ ನಾತಪಂಥದ ಸಂಪ್ರದಾಯದಂತೆ ನಡೆವ ಆಚರಣೆ, ವಿಶೇಷ ಪೂಜೆ ಮತ್ತು ದೀಪ ಪ್ರಜ್ವಲನೆ ಕಾರ್ಯಕ್ರಮ ಗಮನ ಸೆಳೆಯಿತು.

ಸ್ಥಳೀಯ ಭಕ್ತರು ಶಿವರಾತ್ರಿಯಲ್ಲಿ ದೀಪ ಹಚ್ಚುವ ವಿಶಿಷ್ಟ ಸಂಪ್ರದಾಯ ಇದಾಗಿದೆ.
ಈ ವೇಳೆ ತ್ರಿಶೂಲ ಪೂಜೆ ಕೂಡ ವಿಧಿ ವಿಧಾನದಂತೆ ನಡೆಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಬೆಳಗ್ಗೆ ಅಮ್ಮನವರು ಮತ್ತು ಕಾಲಭೈರವ ದೇವರಿಗೆ ಪಂಚಾಮೃತ ಅಭಿಷೇಕದಿಂದ ಆರಂಭವಾಗುವ ನಂತರ ದುನಿ ಪೂಜೆ ನಡೆಯಿತು. ನಂತರ ನಡೆದ ದೀಪ ಪ್ರಜ್ವಲನಾ ಆರಾಧನೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>