ಹೊಸನಗರ : 12ನೇ ಶತಮಾನದಲ್ಲಿ ಬಸವಣ್ಣನವರು ಯಾವ ರೀತಿಯಲ್ಲಿ ಜಾತಿ ಪದ್ದತ್ತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಹೋರಾಟ ನಡೆಸಿದರೂ ಅದೇ ರೀತಿ 18ನೇ ಶತಮಾನದಲ್ಲಿ ಸಮಾಜದಲ್ಲಿ ಬೆಳದಿದ್ದ ಸಮಾಜದ ಜಾತಿಯತೆಯ ಅಂಕು-ಡೊಂಕುಗಳನ್ನು ತಿದ್ದಿ ಎಲ್ಲರೂ ಸಮಾನರು ಎಂದು ಕಾಣಬೇಕೆಂದು ಪಣ ತೊಟ್ಟು ಹೋರಾಟ ಮಾಡಿದ ಬ್ರಹ್ಮಶ್ರೀ ನಾರಾಯಣಗುರುಗಳ ದಿನಾಚರಣೆ ಆಚರಿಸುವಲ್ಲಿ ಮಹತ್ವ ಪಡೆದುಕೊಂಡಿದೆ ಎಂದು ಮಾಜಿ ಶಾಸಕ ಹಾಗೂ ವೈದ್ಯರತ್ನ ಡಾ. ಜಿ.ಡಿ. ನಾರಾಯಣಪ್ಪ ಹೇಳಿದರು.
ಇಲ್ಲಿನ ಆರ್ಯಈಡಿಗರ ಸಬಾಭವನದ ಆವರಣದಲ್ಲಿ ಆರ್ಯಈಡಿಗರ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ ಕಾರ್ಯಕ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ನಮಗಿಂತ ಕೆಳವರ್ಗದವರನ್ನು ಯಾವ ರೀತಿ ನೋಡುತ್ತಿದ್ದೇವೆ ಎಂಬ ಅರಿವು ನಮಗಿರಬೇಕಾಗಿದೆ ನಾವು ಈ ಸಮಾಜದ ಜಾತಿ ಪದ್ದತಿಯನ್ನು ಹೋಗಲಾಡಿಸಬೇಕಾದರೆ ನಾವು ಈ ಸಮಾಜದಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ ಎಂಬ ಜ್ಞಾನ ನಮಗಿರಬೇಕಾಗುತ್ತದೆ ಮುಂದುವರೆದ ಜನಾಂಗದವರ ಬಗ್ಗೆ ನಮ್ಮ ಕೀಳಾಗಿ ಕಾಣುತ್ತಾರೆ ಎಂದು ಸಮಾಜದ ಮುಂದೆ ಹೇಳುತ್ತೇವೆ. ಆದರೆ ನಮಗಿಂತ ಕೆಳಗಿರುವ ಜಾತಿಯವರನ್ನು ನಾವು ಯಾವ ರೀತಿ ನೋಡಿಕೊಳ್ಳುತ್ತಿದ್ದೇವೆ ಎಂಬ ಅರಿವು ನಮಗಿದ್ದರೇ ಇದನ್ನು ತಿದ್ದಿಕೊಂಡರೇ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಕಿಕೊಟ್ಟ ದಾರಿಯನ್ನು ನಾವು ನಡೆದರೆ ಈ ಸಮಾಜವನ್ನು ತಿದ್ದ ಬಹುದು ಎಂದರು.
ಲೇಖನವನ್ನು ಮುಂದುವರಿಸಿ ಓದಿ
ನಾರಾಯಣಗುರುಗಳು ಹೇಳಿದಂತೆ ಒಂದೇ ಸಮಾಜದಲ್ಲಿ ಒಂದೇ ಜಾತಿ ಒಂದೇ ಧರ್ಮ ಹಾಗೂ ಒಬ್ಬನೇ ದೇವರು ಇರಬೇಕು ಎಂದು ಅಂದಿನ ಕಾಲದಲ್ಲಿ ಗುರುಗಳು ಹೇಳಿದ್ದು ಅದನ್ನು ರೂಢಿಸಿಕೊಂಡು ಹೋಗಬೇಕಾದರೆ ಜಾತಿ ಪದ್ದತಿ ನಿರ್ಮೂಲನೆ ಮಾಡಬೇಕಾದರೆ ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಹಿರಿಯರು ಶಿಕ್ಷಕರು ಧರ್ಮಗುರುಗಳನ್ನು ಗೌರವಿಸಬೇಕು ಜೊತೆಗೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವುದಕ್ಕಿಂತ ಮುಂಚೆ ನಾವು ಜಾತಿ ಪದ್ದತಿಯಿಂದ ಮುಕ್ತಿಗೊಳ್ಳಬೇಕೆಂದರು.
ವಿದ್ಯಾವಂತರೇ ಮೂಢನಂಬಿಕೆಗಳ ಮೊರೆ ಹೋಗುತ್ತಿದ್ದಾರೆ : ಬಿ.ಜಿ. ನಾಗರಾಜ್
ಹಿಂದಿನ ಕಾಲದಲ್ಲಿ ಜನರಲ್ಲಿ ವಿದ್ಯೆಯಿರಲಿಲ್ಲ. ಬುದ್ಧಿಯ ಮಟ್ಟ ಕಡಿಮೆಯಿತ್ತು ಬಡತನ ತಂಡಾವವಾಡುತ್ತಿತ್ತು. ಕಾಲ ಬದಲಾವಣೆಯದಂತೆ ಸಮಾಜದಲ್ಲಿ ಬುದ್ಧಿವಂತರು ಶ್ರೀಮಂತರು ರಾಜಕೀಯದಲ್ಲಿ ಪ್ರಭಾವಶಾಲಿಯಾಗಿರುವವರು ನಮ್ಮ ಆರ್ಯಈಡಿಗರ ಜನಾಂಗದಲ್ಲಿದ್ದಾರೆ ಆದರೆ ಹಣ ಬಲ ಜಾತಿ ಬಲ ಹಾಗೂ ರಾಜಕೀಯದಲ್ಲಿ ಮೇಲ್ಮಟ್ಟಕ್ಕೆ ಹೋದಾಗ ಅವರು ಶ್ರೀ ಇತ್ತಿಚೇಗೆ ಹುಟ್ಟಿಕೊಂಡಿರುವ ಶ್ರೀ ಗುರೂಜಿಯವರನ್ನು ನಂಬುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುರೂಜಿಯವರು ಏನೇ ಹೇಳಿದರೂ ಆ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ ಇದರಿಂದ ಜಾತಿ ಪದ್ದತಿ ತೆಗೆಯಲು ಸಾಧ್ಯವೇ? ನಮ್ಮ ಈಡಿಗ ಜನಾಂಗದಲ್ಲಿ ಪ್ರಭಾವ ಶಾಲಿ ರಾಜಕೀಯ ನಾಯಕರಿದ್ದಾರೆ ಪ್ರಭಾವಶಾಲಿ ಹಣವಂತರಿದ್ದಾರೆ ಇವರೆಲ್ಲರೂ ಸೇರಿ ನಮ್ಮ ಆರ್ಯಈಡಿಗರ ಸಂಘದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಅದನ್ನು ಬಿಟ್ಟು ಜಾತಿ-ಜಾತಿಗಳ ಕಚ್ಚಾಟ ಮಾಡುವುದು ಸರಿಯಲ್ಲ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಯಈಡಿಗರ ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರ ವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಆರ್ಯಈಡಿಗ ಸಂಘದ ಉಪಾಧ್ಯಕ್ಷ ಎರಗಿ ಉಮೇಶ್, ಜಿ.ಪಂ. ಮಾಜಿ ಸದಸ್ಯೆ ಬಂಡಿ ಶ್ವೇತಾ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ನೌಕರರ ಸಂಘದ ಅಧ್ಯಕ್ಷ ಬಂಡಿ ಸೋಮಶೇಖರ, ತಾ.ಪಂ. ಮಾಜಿ ಸದಸ್ಯೆ ಗೀತಾ ಲಿಂಗಪ್ಪ, ಸಂಘದ ಸಂಘದ ಕಾರ್ಯದರ್ಶಿ ತ್ರಿಣಿವೆ ಯೋಗೇಂದ್ರ, ನಿರ್ದೇಶಕರಾದ ಮುರುಳಿಧರ, ಎಂ.ಪಿ ಸುರೇಶ್, ಟೀಕಪ್ಪ ಹಾಗೂ ಸಂಘದ ಎಲ್ಲ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ 90%ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

