Hosanagara

ಸಂಸ್ಕಾರ ಪರಂಪರೆ ಉಳಿಸಿ ಬೆಳೆಸುವ ಯಜ್ಞೋಪವೀತ ಧಾರಣೆ

InShot 20260827 162028290

ರಿಪ್ಪನ್‌ಪೇಟೆ : ಮನುಷ್ಯರಾದ ಪ್ರತಿಯೊಬ್ಬರು ನಾವು ದೇವರ ಮೇಲೆ ಶ್ರದ್ದೆ ಭಕ್ತಿಯಿಟ್ಟು ಅವನನ್ನು ಉಪಾಸನೆ ಮಾಡಿ ದೇವರ ಸಾಮಿಪ್ಯವನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಸುದರ್ಶನ್ ಆಚಾರ್ಯ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯ ಜಿಎಸ್‌ಬಿ ಸಮಾಜ ಮಂದಿರದಲ್ಲಿ ಆಯೋಜಿಸಲಾದ ಋಗುಪಾಕರ್ಮ ಕಾರ್ಯಕ್ರಮದಲ್ಲಿ ಹೋಮ ಹವನ ಕಾರ್ಯಕ್ರಮ ನೇರವೇರಿಸಿ ಜನಿವಾರ ಧಾರಣೆ ಮಾಡಿಸಿ ಲೋಕಕಲ್ಯಾಣಕ್ಕಾಗಿ ಮತ್ತು ಸಂವೃದ್ಧವಾಗಿ ಮಳೆ ಬೆಳೆಗಾಗಿ ಭಗವಂತನಲ್ಲಿ ಪ್ರಾರ್ಥಿಸಿ ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಧಾರ್ಮಿಕ ಆಚರಣೆಗಳಿಗೆ ಮಹತ್ವ ನೀಡಬೇಕು. ಯಜ್ಞೋಪವಿತ ಧಾರಣೆಯನ್ನು ಕೇವಲ ವಿಶೇಷ ದಿನಗಳಿಗೆ ಸೀಮಿತಗೊಳಿಸದೆ ಪ್ರತಿನಿತ್ಯ ಶ್ರದ್ದೆಯಿಂದ ಆಚರಿಸುವ ಮೂಲಕ ನಮ್ಮ ಹಿರಿಯರು ನೀಡಿರುವ ಸಂಸ್ಕಾರ ಮತ್ತು ಪರಂಪರೆಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.

ಜೆ.ಎಸ್.ಬಿ.ಸಮಾಜದ ಅಧ್ಯಕ್ಷ ಗಣೇಶ ಕಾಮತ್, ಉಮೇಶ್‌ಭಟ್, ಹರೀಶ ಶಂಕರ ಸರಾಫ್, ಹರೀಶ್‌ಪ್ರಭು, ಎಂ.ಆರ್.ಭಟ್, ಜೆ.ರಾಧಾಕೃಷ್ಣ, ರಾಜಾರಾಂ ಬಾಳಿಗ, ಇನ್ನಿತರ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>