ಹೊಸನಗರ : ತಾಲೂಕಿನ ಹುಂಚ ಸಮೀಪದ ಸಮಟಗಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿಗೆ 2026-27ನೇ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ಹೊಸನಗರ ತಾಲೂಕು ರಾಜರತ್ನ ಪುನೀತ್ ರಾಜ್‍ಕುಮಾರ್ ಕನ್ನಡ ಸಂಘ ಹೊಸನಗರ ತಾಲೂಕು ಹಾಗೂ ಕನ್ನಡ ಸಾಹಿತ್ಯ ಪರಿಷತ್ ನವರು ಜಂಟಿಯಾಗಿ ಸುಮಟಗಾರು ಶಾಲೆಗೆ ಭೇಟಿ ನೀಡಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರತ್ನಕುಮಾರಿಗೆ ಸಹೋದ್ಯೋಗಿಗಳ ಹಾಗೂ ಪುಟಾಣಿ ಮಕ್ಕಳ ಜೊತೆಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಗ್ರಾಮೀಣ ಪ್ರತಿಭೆ ರತ್ನಕುಮಾರಿಯವರಿಗೆ ಅಭಿನಂದಿಸಿದ ಸುವರ್ಣ ಕ್ಷಣದಲ್ಲಿ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಮಾರ್ಷಲ್ ಶರಾo, ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ಎಚ್, ರಾಜರತ್ನ ಡಾ. ಪುನೀತ್ ರಾಜ್‍ಕುಮಾರ್ ಕನ್ನಡ ಸಂಘ ಅಧ್ಯಕ್ಷ ಪ್ರಶಾಂತ್, ಸುರೇಶ್, ಗಣೇಶ, ಕನ್ನಡ ಸಾಹಿತ್ಯ ಪರಿಷತ್ತಿನ ಕೆ ಜಿ ನಾಗೇಶ್, ಪತ್ರಕರ್ತರಾದ ಎಸ್ ಸದಾನಂದ, ಎಚ್ ಆರ್ ಶ್ರೀಕಂಠ, ಮೊದಲಾದವರು ಉಪಸ್ಥಿತರಿದ್ದು, ದೇಶದ 48 ಉತ್ತಮ ಶಿಕ್ಷಕರಲ್ಲಿ ಒಬ್ಬರಾಗಿ ಆಯ್ಕೆಯಾದ ರತ್ನಕುಮಾರಿಯವರ ಸೇವೆ ಕರ್ತವ್ಯ ನಿಷ್ಠೆ ಹಾಗೂ ದೂರದೃಷ್ಟಿತ್ವದ ಬಗ್ಗೆ ಅಭಿನಂದಿಸಲಾಯಿತು.

