ರಿಪ್ಪನ್‌ಪೇಟೆ : ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಲೋಕಕಲ್ಯಾರ್ಥಾವಾಗಿ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಮೂಲಕರ್ತೃ ಚನ್ನಬಸವ ಮತ್ತು ಸಿದ್ದಲಿಂಗ ಮಹಾಸ್ವಾಮಿಗಳವರ ರುದ್ರಾಭಿಷೇಕ ಶಿವಪೂಜಾನುಷ್ಟಾನ ಇನ್ನಿತರ ಪೂಜಾ ಕೈಂಕರ್ಯಗಳು ಭಕ್ತರ ಸಮ್ಮುಖದಲ್ಲಿ ನೆರವೇರಿದವು.
ಶ್ರಾವಣ ಮಾಸದ ಪ್ರಯುಕ್ತ ಲೋಕಕಲ್ಯಾರ್ಥಾವಾಗಿ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರಾವಣದ ಒಂದು ತಿಂಗಳ ಪರ್ಯಾಂತ ಆಚರಿಸಲಾಗುವ ಈ ಪೂಜಾ ಕಾರ್ಯವು ಇತ್ತೀಚಿನ ದಿನಗಳಲ್ಲಿ ಸಂಪ್ರದಾಯ ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳ ಆಚರಣೆಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಸಂಸ್ಕಾರ ಸೌಹಾರ್ದತೆ ಭಾವೈಕ್ಯತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳಸುವ ನಿಟ್ಟಿನಲ್ಲಿ ಶ್ರಾವಣ ಮಾಸ ಪೂಜಾ ಕೈಂಕರ್ಯಗಳು ಮತ್ತು ಗುರುಗಳ ಉಪದೇಶಾಮೃತಗಳು ಮಹತ್ವದ ಪಾತ್ರವಹಿಸುತ್ತದೆ ಎಂದ ಶ್ರೀಗಳು ಇಂದಿನ ಒತ್ತಡದ ಬದುಕಿನಲ್ಲಿ ಪೂಜೆ ಪುನಸ್ಕಾರಗಳಿಂದ ಯುವ ಜನಾಂಗ ದೂರವಾಗುತ್ತಿದ್ದು ಶ್ರಾವಣದ ಒಂದು ತಿಂಗಳ ನಡೆಯುವ ಇಂತಹ ಧಾರ್ಮಿಕ ಧರ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದರ್ಶನಾಶೀರ್ವಾದ ಪಡೆದರೆ ಶಾಂತಿ ನೆಮ್ಮದಿ ಕಾಣಬಹುದೆ ಎಂದರು.

ಈ ಶ್ರಾವಣ ಮಾಸದ ಶಿವಪೂಜಾನುಷ್ಟಾನ ಕಾರ್ಯಕ್ರಮದಲ್ಲಿ ಜಬಗೋಡು ಕುಟುಂಬಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ಗುರುಗಳ ದರ್ಶನಾಶೀರ್ವಾದ ಪಡೆದರು.
ಲಿಂ. ಚನ್ನಬಸವ ಮಹಾಸ್ವಾಮಿಗಳ ಮತ್ತು ಲಿಂ. ಸಿದ್ದಲಿಂಗ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಶಿವಪೂಜಾನುಷ್ಟಾನ ತೀರ್ಥ ಪ್ರಸಾದ ಹಾಗೂ ಸಾಮೂಹಿಕ ದಾಸೋಹ ಜರುಗಿತು.

