ರಿಪ್ಪನ್‌ಪೇಟೆ : ಕೋಣಂದೂರು ಸಮೀಪದ ಕೋಟೆಗದ್ದೆ ತ್ಯಾರಂದೂರು ಗವಿಮಠಕ್ಕೆ ಪಟ್ಟಾಧ್ಯಕ್ಷರಾಗಿ ರಿಪ್ಪನ್‌ಪೇಟೆ ಗವಟೂರು ಗ್ರಾಮದ ಮಲ್ಲಾಪುರ ಜಗದೀಶಯ್ಯನವರ ಎರಡನೇ ಪುತ್ರ ಲೋಕೇಶ್ ಇವರನ್ನು ವೀರಶೈವ ಸಂಪ್ರದಾಯದಂತೆ ಉಜ್ಜಯನಿ ಜಗದ್ಗುರುಗಳ ದಿವ್ಯಸಾನ್ನಿಧ್ಯದಲ್ಲಿ ಪಟ್ಟಾಭಿಷೇಕ ನೇರವೇರಿತು.
ವೀರಾಪುರ ಮಠದ ಸ್ವಾಮಿಜಿಯವರ ಮಾರ್ಗದರ್ಶನ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ಕೋಟೆಗದ್ದೆ ತ್ಯಾರಂದೂರು ಗವಿಮಠದ ಗ್ರಾಮಸ್ಥರು ಹಾಗೂ ತೀರ್ಥಹಳ್ಳಿ ವೀರಶೈವ ಸಮಾಜದ ಅಧ್ಯಕ್ಷ ಟಿ.ಜಿ.ಮುರುಗೇಂದ್ರಪ್ಪಗೌಡ ಹಾಗೂ ಶಾಸಕ ಆರಗ ಜ್ಞಾನೇಂದ್ರ ಇವರ ಉಪಸ್ಥಿತಿಯಲ್ಲಿ ನೂತನ ಶ್ರೀಗಳ ಪಟ್ಟಾಧಿಕಾರ ನೇರವೇರಿತು.
ನೂತನ ಶ್ರೀಗಳ ಕಿರುಪರಿಚಯ :
ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಗವಟೂರು ಗ್ರಾಮದ ಮಜರೆ ಮಲ್ಲಾಪುರ ಜಂಗಮ ಜಗದೀಶಯ್ಯ ತಾಯಿ ಅನ್ನಪೂರ್ಣಮ್ಮನವರಿಗೆ 2ನೇ ಮಗನಾಗಿ ಜನಿಸಿದ ಲೋಕೇಶ್ ಇವರು ಪ್ರಾಥಮಿಕ ಶಿಕ್ಷಣವನ್ನು ತ್ಯಾರಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಪ್ರೌಢ ಪದವಿ ಪೂರ್ವ ಶಿಕ್ಷಣವನ್ನು ಕೋಣಂದೂರು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಪದವಿ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಸಂಸ್ಕೃತ ವೇದದ್ಯಯನವನ್ನು ವೀರಾಪುರ ಮಠದಲ್ಲಿ ಅಭ್ಯಾಸ ಮಾಡಿರುತ್ತಾರೆ.
ಲೇಖನವನ್ನು ಮುಂದುವರಿಸಿ ಓದಿ
ಗವಿಮಠದ ಇತಿಹಾಸ :
ಸುಮಾರು ವರ್ಷಗಳ ಹಿಂದೆ ರುದ್ರಮುನಿ ಸ್ವಾಮಿಜಿಗಳ ಗವಿಯಲ್ಲಿ ತಪಸ್ಸು ಮಾಡಿರುವುದರಿಂದ ಅವರು ಗದ್ದಿಗೆ ಆಲ್ಲೆ ಇತ್ತು. ಗವಿಗೆ ಪೂಜೆಗೆ ಹೋಗಲು ಕಷ್ಟವಾದದ್ದರಿಂದ ಕೋಟೆಗದ್ದೆ ವೀರಭದ್ರಪ್ಪಗೌಡರ ಮತ್ತು ನಾಗಪ್ಪಗೌಡರ ಇತರ ನಾಲ್ಕು ಜನ ಸಹೋದರರು ಸೇರಿ ಅವರ ತಂದೆಯ ನೆನಪಿಗಾಗಿ ದೇವಸ್ಥಾನವನ್ನು ನಿರ್ಮಿಸಿ ಅದರ ನಿತ್ಯ ಪೂಜೆಗೆ ಶಿವಮೂರ್ತಿ ಶಾಸ್ತ್ರಿ ಅವರನ್ನು ನೇಮಿಸುವ ಮೂಲಕ ಜೀವನೋಪಾಯಕ್ಕಾಗಿ 3 ಎಕರೆ ಜಮೀನು ದಾನವಾಗಿ ಕೊಟ್ಟು ಪೂಜೆ ಮಾಡಿಕೊಂಡು ಹೋಗಿ ಎಂದು ನೇಮಿಸಿರುತ್ತಾರೆನ್ನಲಾಗಿದೆ. ದೇವಸ್ಥಾನದ ಪೂಜೆಗೆ ನೇಮಕವಾದ ಶಿವಮೂರ್ತಿ ಶಾಸ್ತ್ರಿಗಳಿಗೆ ಗಂಡು ಸಂತಾನವಿಲ್ಲದ ಕಾರಣ ಅವರ ಅಳಿಯ ಮಲ್ಲಾಪುರ ಜಗದೀಶಯ್ಯ ಇವರನ್ನು ಗವಿಮಠದ ದೇವರ ಪೂಜೆಯನ್ನು ಮಾಡಿಕೊಂಡು ಹೋಗಲು ನೇಮಕವಾಗಿರುವ ಸುಸಂಸ್ಕೃತ ಕುಟುಂಬದ ಜಗದೀಶಯ್ಯ ಮತ್ತು ತಾಯಿ ಅನ್ನಪೂರ್ಣೆಮ್ಮನವರ ಎರಡನೇ ಪುತ್ರ ಲೋಕೇಶ್ ಇವರು ಕೋಟೆಗದ್ದೆ-ತ್ಯಾರಂದೂರು ಗವಿಮಠದ ಪಟ್ಟಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಉಜ್ಜಯನಿ ಜಗದ್ಗುರುಗಳ ದಿವ್ಯಸಾನ್ನಿಧ್ಯದಲ್ಲಿ ವೀರಾಪುರ ಮಠದ ಸ್ವಾಮಿಜಿಯವರ ಮಾರ್ಗದರ್ಶನ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ಕೋಟೆಗದ್ದೆ ತ್ಯಾರಂದೂರು ಗವಿಮಠದ ಗ್ರಾಮಸ್ಥರು ಹಾಗೂ ತೀರ್ಥಹಳ್ಳಿ ವೀರಶೈವ ಸಮಾಜದ ಅಧ್ಯಕ್ಷ ಟಿ.ಜಿ.ಮುರುಗೇಂದ್ರಪ್ಪಗೌಡ ಹಾಗೂ ಶಾಸಕ ಆರಗ ಜ್ಞಾನೇಂದ್ರ ಇವರ ಉಪಸ್ಥಿತಿಯಲ್ಲಿ ನೂತನ “ಸಾನಂದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ’’ ಎಂಬ ನಾಮಾಂಕಿತ ನೀಡಿ ವೀರಶೈವ ಪಂಚಾಚಾರ್ಯ ಲಾಂಚನವನ್ನು ನೀಡಿ ಉಜ್ಜಯನಿ ಜಗದ್ಗುರು ಘೋಷಿಸಿ ಆಶೀರ್ವದಿಸಿದರು.

