Hosanagara

ಹೊಂಬುಜದಲ್ಲಿ ಜನಿವಾರ ಧಾರಣೆ ಪರ್ವ ; ಜೀವನದಲ್ಲಿ ಸಮ್ಯಕ್ತ್ವ ಪ್ರಾಪ್ತಿಗಾಗಿ ರತ್ನತ್ರಯ ಧಾರಣೆ : ಶ್ರೀಗಳು

InShot 20260826 183556685

ಹೊಸನಗರ : ‘ಜೀವನದಲ್ಲಿ ಧರ್ಮ ಪರಿಪಾಲನೆಯನ್ನು ನಿರಂತರ ಮಾಡುವುದರಿಂದ ಸಾತ್ವಿಕ ಮನೋಭಾವವು ಸ್ಪುರಿಸುತ್ತದೆ. ಬಾಲ್ಯದಿಂದ ವಿದ್ಯಾಸಂಪನ್ನರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ವ್ಯವಹಾರ-ಸೇವೆ ಮಾಡುವಂತಿದ್ದರೂ ಸದ್ಧರ್ಮ ಅನುಸರಿಸುವುದು ಮಹತ್ವವಾಗಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನೂಲಶ್ರಾವಣದಂದು (ಶ್ರವಣ ನಕ್ಷತ್ರ) ಮಂಗಲ ಆಶೀರ್ವಚನದಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

‘ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರ್ಯ ಗುಣಗಳು ಜೈನಧರ್ಮದಲ್ಲಿ ರತ್ನತ್ರಯ ಎಂದು ಉಲ್ಲೇಖಿಸಲಾಗಿದ್ದು, ಬಾಲ್ಯದಿಂದಲೇ ರತ್ನತ್ರಯ ಸೂತ್ರಧಾರಣೆ ಮಾಡುವುದರಿಂದ ಪರಿವರ್ತನೆ, ಅಭಿವೃದ್ಧಿ, ಶಾಂತಿಯ ಸಂಕೇತವಾಗಿದೆ’ ಎಂದು ವಿವರಿಸಿದರು. ಊರ ಪರವೂರ ಭಕ್ತರಿಗೆ ರತ್ನತ್ರಯ (ಜನಿವಾರ) ನೀಡಿ, ಆಶೀರ್ವದಿಸಿದರು.

ಪ್ರಾತಃಕಾಲ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ, ಮಹಾಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿ-ವಿಧಾನದಲ್ಲಿ ಪೂಜೆಯನ್ನು ನೆರವೇರಿಸಲಾಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಶ್ರೀ ಕುಂದಕುಂದ ವಿದ್ಯಾಪೀಠ ಗುರುಕುಲದ ವಿದ್ಯಾರ್ಥಿ ವೃಂದದವರು ಹಾಗೂ ಊರ ಪರವೂರ ಭಕ್ತಸಮುದಾಯದವರು ರತ್ನತ್ರಯ ಧಾರಣೆಯ ಪೂರ್ವದಲ್ಲಿ ಣಮೋಕಾರ ಮಂತ್ರ ಪಠಿಸಿದರು.

ಶ್ರೀಕ್ಷೇತ್ರದ ಎಲ್ಲ ಜಿನಮಂದಿರಗಳಲ್ಲಿ ಪರಂಪರಾನುಗತ ಪೂಜೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಾರ್ಥಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>