Ripponpete

ರಿಪ್ಪನ್‌ಪೇಟೆ ಶ್ರೀಸಿದ್ದಿವಿನಾಯಕ ಸ್ವಾಮಿಯ ವಿಜೃಂಭಣೆಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ ; ಪುರಾಣ ಪ್ರಸಿದ್ದ ಶ್ರೀ ವರಸಿದ್ದಿವಿನಾಯಕ ಸ್ವಾಮಿ ಶ್ರೀಮನ್ಮಹಾರಥೋತ್ಸವವು ಭಕ್ತರ ಶ್ರದ್ದಾಭಕ್ತಿಯಿಂದ ವಿಜೃಂಭಣೆಯೊಂದಿಗೆ ನೆರವೇರಿತು.

WhatsApp Group Join Now
Telegram Group Join Now
Instagram Group Join Now

ಇಂದು 12.59 ಕ್ಕೆ ಶುಭ ಮೂಹರ್ತದಲ್ಲಿ ಶಿವಮೊಗ್ಗ ವೇದ ವಿದ್ವಾನ್ ವಸಂತ್ ಭಟ್ ಮತ್ತು ತಮ್ಮ ಪುರೋಹಿತ ವೃಂದದದರು ನೇತೃತ್ವದಲ್ಲಿ ವರಸಿದ್ದಿವಿನಾಯಕ ಸ್ವಾಮಿಗೆ ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಾ ಕೈಂಕರ್ಯ ನೆರವೇರಿಸುವುದರೊಂದಿಗೆ ಶ್ರೀಸಿದ್ದಿವಿನಾಯಕಸ್ವಾಮಿ ರಥವೇರುತ್ತಿದ್ದಂತೆ ಜಯಘೋಷಣೆಯೊಂದಿಗೆ ಸಿದ್ದಿವಿನಾಯಕ ಸ್ವಾಮಿ ಕೀ ಜೈ, ಗಣಪತಿ ಕೀ ಜೈ, ವಿನಾಯಕನ ಹಲವು ನಾಮಗಳೊಂದಿಗೆ ಜೈ ಘೋಷಣೆಯನ್ನು ಭಕ್ತ ಸಮೂಹದಿಂದ ಮೊಳಗಿತು.

ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ರಥವನ್ನು ಉತ್ತರ ದಿಕ್ಕಿನತ್ತ ಭಕ್ತರು ಜಯ ಘೋಷಣೆಯೊಂದಿಗೆ ಎಳೆಯುತ್ತಿದ್ದಂತೆ ಭಕ್ತರು ನಾ ಮುಂದೆ ತಾ ಎಂದು ಮುನ್ನುಗುತ್ತಾ ರಥವನ್ನು ಉರಿ ಬಿಸಿಲನ್ನು ಲೆಕ್ಕಿಸದೆ ಎಳೆದು ನಂತರ ದಕ್ಷಿಣಾಭಿಮುಖವಾಗಿ ರಥವು ವಿನಾಯಕ ವೃತ್ತದ ಕಡೆ ಹೊರಟ ರಥೋತ್ಸವಕ್ಕೆ ರಸ್ತೆಯುದ್ದಕ್ಕೂ ಸಾರ್ವಜನಿಕರು ತಮ್ಮ ಮುಂದಿನ ರಸ್ತೆಗೆ ನೀರು ಹಾಕಿ ಭಗವಂತನನ್ನು ಸ್ವಾಗತಿಸುತ್ತಾ ಭರಮಾಡಿಕೊಂಡ ದೃಶ್ಯ ವಿಶೇಷವಾಗಿತ್ತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಿದ್ದಿವಿನಾಯಕ ಸ್ವಾಮಿಯ ರಥೋತ್ಸವಕ್ಕೆ ಮತ್ತು ಚಂಡೆ ಹಾಗೂ ಮಹಿಳಾ ಸಂಘಟನೆಗಳಿಂದ ಭಜನೆ ಕೀರ್ತನೆಗಳು ಸಾಂಗವಾಗಿ ನೇರವೇರಿದವು. ವಿವಿಧ ಸಂಘ ಸಂಸ್ಥೆವತಿಯಿಂದ ಮುಜ್ಜಿಗೆ ನೀರು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಿದ್ದಿವಿನಾಯಕ ಸ್ವಾಮಿಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಹಾಗೂ ದೇವಸ್ಥಾನ ಸೇವಾ ಸಮಿತಿಯವರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]