Ripponpete

ರಿಪ್ಪನ್‌ಪೇಟೆ ; ಸಂಭ್ರಮ ಸಡಗರದೊಂದಿಗೆ ನಡೆದ ಗೋಪೂಜೆ

RIPPONPETE ; ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿಧೆಡೆಯಲ್ಲಿ ಶ್ರದ್ದಾಭಕ್ತಿಯಿಂದ ಗೋಪೂಜೆಯನ್ನು ನೆರವೇರಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೆಖರ ಭಟ್ ಮತ್ತು ಗುರುರಾಜ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಅಕ್ಕಿ, ಗೋಧಿ, ಬಾಳೆಹಣ್ಣು, ಬೆಲ್ಲ ನೀಡಿ ವಿಶೇಷ ಪೂಜೆ ಸಲ್ಲಿಸಿದರೆ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದಲ್ಲಿ ಅಭಿನವ ಚನ್ನಬಸವ ಮಹಾಸ್ವಾಮೀಜಿ ಮಠದ ಪ್ರಾಂಗಣದಲ್ಲಿ ಗೋಪೂಜೆಯನ್ನು ನೆರವೇರಿಸಿ ರೈತರ ನಿತ್ಯದ ಕಾಯಕ ಯೋಗಿಯಂತಾಗಿರುವ ಗೋ ಮಾತೆಯಿಂದ ಮುಕೋಟಿ ದೇವರುಗಳನ್ನು ಪೂಜೆ ಮಾಡಿದ ಫಲ ಲಭಿಸುವುದು ಎಂದರು.

ಅದೇ ರೀತಿಯಲ್ಲಿ ಮುಸ್ಲಿಂ ಕುಟುಂಬದವರು ಗೋಪೂಜೆಯನ್ನು ಹಿಂದೂ ಸಂಪ್ರದಾಯದಂತೆ ಗೋ ಮಾತೆಗೆ ಹೂವು ಕಟ್ಟಿ ಅಲಂಕಾರ ಮಾಡಿ ಮೂಜಿಸುವ ಮೂಲಕ ಭಾವೈಕ್ಯತೆಯನ್ನು ಮೆರೆದಿರುವುದು ವಿಶೇಷವಾಗಿತ್ತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಶ್ರಮದಾನದೊಂದಿಗೆ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ ಕೋಣಂದೂರು ಮಠದ ಭಕ್ತರು

RIPPONPETE ; ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದಲ್ಲಿ ನವಂಬರ್ 7 ಮತ್ತು 8 ರಂದು  ಆಯೋಜಿಸಲಾಗಿರುವ ಗುರು ವಿರಕ್ತರ ಸಮಾಗಮ ಮತ್ತು 1008 ಮುತ್ತೈದೆಯರಿಗೆ  ಉಡಿ ತುಂಬುವುದು ಹಾಗೂ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದ ಆಂಗವಾಗಿ ಇಂದು ಕೋಣಂದೂರು ಬೃಹನ್ಮಠದ ಭಕ್ತ ಸಮೂಹ ಸಾಮೂಹಿಕವಾಗಿ ಪಾಲ್ಗೊಂಡು ಮಠದ ಸ್ವಚ್ಚತಾ ಕಾರ್ಯವನ್ನು ಶ್ರಮದಾನದ ಮೂಲಕ ನೆರವೇರಿಸಿದರು.

ಗವಟೂರಿನ ಜಿ.ಡಿ.ಮಲ್ಲಿಕಾರ್ಜುನ ನೇತೃತ್ಚಬದಲ್ಲಿ 30ಕ್ಕೂ ಹೆಚ್ಚಿನ ಯುವಕರ ತಂಡ ಶ್ರಮದಾನದಲ್ಲಿ ತೊಡಗಿದರು.

ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ತೊಗರ್ಸಿ ಮಳೆ ಹಿರೇಮಠದ
ಅಭಿನವ ಮಹಾಂತದೇಶಿ ಕೇಂದ್ರ ಶಿವಾಚಾರ್ಯ ಸ್ವಾಮಿಗಳು ಹಾಗೂ ಕೂಡಲಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ ಭಕ್ತರನ್ನು ಅಭಿನಂದಿಸಿ ಶುಭ ಹಾರೈಸಿದರು.

ಗವಟೂರು, ಕುಕ್ಕಳಲೇ, ಜಂಬಳ್ಳಿ, ಶಿವಪುರ, ಹರತಾಳು, ನೆವಟೂರು, ರಿಪ್ಪನ್‌ಪೇಟೆ ಇನ್ನಿತರ ಗ್ರಾಮಗಳ ಭಕ್ತರು ಹಾಜರಿದ್ದರು.

ಬೆಳಕೋಡು ಹಾಲಸ್ವಾಮಿಗೌಡ, ನಿರಂಜನ ಸ್ವಾಮಿ ಮಲ್ಲಾಪುರ, ನೆವಟೂರು ದೇವೇಂದ್ರಪ್ಪಗೌಡ, ಮಲ್ಲಿಕಾರ್ಜುನ ಗವಟೂರು, ಚಿದಾನಂದ ಗವಟೂರು, ಸೂರ್ಯಗೌಡ, ಜಿ.ಎಂ.ರಚನಗೌಡ, ಕೀರ್ತಿಗೌಡ ಕುಕ್ಕಳಲೇ, ಈಶ್ವರಪ್ಪಗೌಡ, ಭರತ, ದೊರೆಸ್ವಾಮಿ ಹುಳಗದ್ದೆ, ವೀರೇಶ ಬೆಳಕೋಡು, ನವೀನ, ಬೈರೇಶ, ಅಭಿಷೇಕ, ಗೌತಮ್, ಅರುಣ್, ಸುನೀಲ್, ದರ್ಶನ, ಆದರ್ಶ, ಧರ್ಮರಾಜ್, ಶಿವಕುಮಾರಗೌಡ ನಂಜುವಳ್ಳಿ, ಓಂಕಾರಗೌಡ, ಗಣೇಶ, ಸದಾನಂದ ಜಂಬಳ್ಳಿ ಇನ್ನಿತರರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>