Ripponpete

ಗ್ರಾಮ ದೇವರುಗಳಿಗೆ ಕೋಳಿ, ಕುರಿ ಬಲಿಯೊಂದಿಗೆ ದೀಪಾವಳಿ ನೋನಿ ಸಂಭ್ರಮಾಚರಣೆ

RIPPONPETE ; ಸುತ್ತಮುತ್ತಲಿನ ಊರುಗಳಲ್ಲಿ ಗ್ರಾಮದೇವರುಗಳಿಗೆ ಕುರಿ, ಕೋಳಿಗಳ ಬಲಿ ನೀಡುವ ಮೂಲಕ ದೀಪಾವಳಿಯ ನೋನಿಯನ್ನು ಸಂಭ್ರಮಾಚರಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸುವುದು ವಿಶೇಷ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಲೆನಾಡಿನ ವಿಶೇಷ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬಕ್ಕೆ ಜನ ಅಗತ್ಯ ಖರೀದಿಯೊಂದಿಗೆ ಹಬ್ಬಕ್ಕೆ ಊರಿನ ಗ್ರಾಮದ ಮನೆ ದೈವಗಳಿಗೆ ಹರಕೆ ಸಲ್ಲಿಸಿ ಪ್ರಸಕ್ತ ವರ್ಷದಲ್ಲಿ ಬೆಳೆದಿರುವ ಬೆಳೆ ಬೇಸಾಯಗಳಿಗೆ ಮಕ್ಕಳು ಮರಿಗಳಿಗೆ ಜಾನುವಾರುಗಳಿಗೆ ಯಾವುದೇ ರೋಗ ರುಜಿನೆ ಹರಡದಂತೆ ಪ್ರಾರ್ಥಿಸಿ ದೇವರು ದೈವಗಳಲ್ಲಿ ಮೊರೆಹೋಗಿ ಭಕ್ತಿಯಿಂದ ಪ್ರಾರ್ಥಿಸಿ ಹರಕೆ ಒಪ್ಪಿಸುವುದು ನಮ್ಮ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯದ ಹಬ್ಬವೇ ನೋನಿ ಎಂದು ರೈತ ಮುಖಂಡ ಮುಡುಬ ಧರ್ಮಪ್ಪ, ರತೇಶ್ವರಪ್ಪಗೌಡ, ಹುಚ್ಚಪ್ಪ ಕಣಬಂದೂರು, ಬೆಳಂದೂರು ಕಾಮಾಕ್ಷಪ್ಪಗೌಡ, ಕಗ್ಗಲಿ ಚನ್ನವೀರಪ್ಪಗೌಡ, ದೂನ ಮುರಿಗಪ್ಪಗೌಡ, ಜಂಬಳ್ಳಿ ಶಾಂತಕುಮಾರ್, ಕುಕ್ಕಳಲೇ ಈಶ್ವರಪ್ಪಗೌಡ  ಮಾಧ್ಯಮ ಪ್ರತಿನಿಧಿಗಳಲ್ಲಿ ತಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ನಮ್ಮ ಮುಂದಿನ ಪೀಳಿಗೆಯವರು ಆಚರಿಸುವಂತಾಗಲಿ ಎಂದು ಹೇಳಿದರು.

ರೈತರ ಜಮೀನಿನ ಮತ್ತು ಊರಿನ ಗಡಿಯಂಚಿನಲ್ಲಿರುವ ಗ್ರಾಮದಲ್ಲಿನ ಶೀಲವಂತ ಚೌಡಿ, ಅನ್ಯ ಆಹಾರ ಸ್ವೀಕರಿಸುವ ಬರುವೆ ಗಾಮನಬನ, ಗವಟೂರಿನ ಚಿಕ್ಕಬೀರಣಕೆರೆ ಭೂತಪ್ಪ, ಮಲ್ಲಾಪುರ ಗ್ರಾಮದ ಮರಬಿನಕುಣಿ ಭೂತಪ್ಪ, ವರನಹೊಂಡ ಭೂತರಾಯ, ರಣ, ಯಕ್ಷಿಣಿ  ಬೈರಾಪುರ, ಮುಡುಬ, ಬೆನವಳ್ಳಿ, ಲಕ್ಕವಳ್ಳಿ, ಮಾದಾಪುರ, ಬೆಳಂದೂರು, ಮಸರೂರು, ತಮ್ಮಡಿಕೊಪ್ಪ, ಬಸವಾಪುರ, ಹೆದ್ದಾರಿಪುರ, ಕೊಳವಳ್ಳಿ, ಕೋಟೆತಾರಿಗ, ಬೆಳ್ಳೂರು, ಹಾಲುಗುಡ್ಡೆ, ಮಾದ್ಲಾರದಿಂಬ, ನೇರಲುಮನೆ, ಕುಕ್ಕಳಲೇ, ಕೆದಲುಗುಡ್ಡೆ ಇನ್ನಿತರ ಗ್ರಾಮಗಳ ದೇವರುಗಳಿಗೆ ನೋನಿ ಸಂದರ್ಭದಲ್ಲಿ ದೇವರ ಬನವನ್ನು ಊರಿನವರಲ್ಲಾ ಜಾತಿ ಭೇದ ಭಾವನೆ ಇಲ್ಲದೆ ಎಲ್ಲರೂ ಮನೆಗೆ ಒಬ್ಬರು ಇಬ್ಬರಂತೆ ತೆರಳಿ ಸ್ವಚ್ಚಗೊಳಿಸಿ ತಳಿರು ತೋರಣಗಳೊಂದಿಗೆ ಬಾಳೆ ಕಬ್ಬಿನ ಸುಳಿಯನ್ನು ಕಟ್ಟಿ ಚೆಂಡುಹೂವಿನ ಮಾಲೆಯೊಂದಿಗೆ ಅಲಂಕರಿಸಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ  ಹಣ್ಣು ಕಾಯಿ ಸಮರ್ಪಿಸಿ ಕೋಳಿ, ಕುರಿಗಳೊಂದಿಗೆ ವರಹ (ಹಂದಿ)ಗಳನ್ನು ಬಲಿ ನೀಡುವುದು ಹಬ್ಬದ ಪದ್ದತಿಯಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>