ರಿಪ್ಪನ್‌ಪೇಟೆ ಭಕ್ತವೃಂದದಿಂದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಜನ್ಮದಿನೋತ್ಸವ

Written by malnadtimes.com

Published on:

ರಿಪ್ಪನ್‌ಪೇಟೆ ; ನಡೆದಾಡುವ ದೇವರು ತ್ರಿವಿಧ ದಾಸೋಹಿ, ಶತಾಯಿಷಿ, ಕಾಯಕಯೋಗಿ ಲಿಂ|| ಡಾ.ಶಿವಕುಮಾರ ಮಹಾಸ್ವಾಮಿಗಳ 118ನೇ ವರ್ಷದ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆ ಭಕ್ತ ಬಳಗದವರು ಇಲ್ಲಿನ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಲಿಂ|| ಡಾ.ಶಿವಕುಮಾರ ಮಹಾಸ್ವಾಮಿಗಳ 118ನೇ ಜನ್ಮ ದಿನಾಚರಣೆಯಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿ ಸೇವೆ ಸಲ್ಲಿಸಿದರು.

ಸಗರ ಸಭೆಯ ನಿವೃತ್ತ ಸಮುದಾಯ ಸಂಘಟನಾಧಿಕಾರಿ ಎಂ.ಜಿ. ಹಬೀಬ್ ಮಾತನಾಡಿ, ಬಸವೇಶ್ವರ ನಿಜವಾದ ಪ್ರತಿಪಾದಕ ಸಿದ್ದಗಾಂಗಾ ಶ್ರೀಗಳು. ಅನ್ನ, ಅಕ್ಷರ ಆಶ್ರಯದಂತ ತ್ರಿವಿಧ ದಾಸೋಹವನ್ನು ಯಾವುದೇ ಜಾತಿ ಧರ್ಮಗಳ ಬೇದವಿಲ್ಲದೇ ಪ್ರತಿ ವರ್ಗಗಳಿಗೆ ದಾರೆ ಎರೆದ ನಡೆದಾಡುವ ದೇವರಾಗಿ ಜನಸಾಮಾನ್ಯರಿಗೆ ಹತ್ತಿರವಾದವರು ಇವ ನಾರವ, ಇವ ನಮ್ಮವ ಎನ್ನುವ ಬಸವೇಶ್ವರರ ನುಡಿಯನ್ನು ಅಕ್ಷರ ಸಹ ಪಾಲಿಸಿದವರು ಇಂತಹ ಮಹನೀಯರ ಜನ್ಮ ದಿನೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮಯ ಸಂಗತಿಯಾಗಿದೆ ಎಂದರು.

ಜಿಲ್ಲಾ ಸಂಚಾಲಕ ಹಾಗೂ ರಂಗ ಕರ್ಮಿ ಡಾ.ಗಣೇಶ್ ಆರ್.ಕೆಂಚನಾಲ ಮಾತನಾಡಿ, ಕಾವಿ ತೊಟ್ಟ ಕೆಲ ಸ್ವಾಮೀಜಿಗಳು ಕೇವಲ ತಮ್ಮ ಸ್ವಜಾತಿಗೆ ಸೀಮಿತವಾದ ಹಾಗೂ ರಾಜಕೀಯ ಪಕ್ಷಗಳ ವಕ್ತಾರರಂತೆ ಕಾಣುವ ಈ ಹೊತ್ತಲ್ಲಿ. ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಶಿಕ್ಷಣ ನೀಡಿ ಸಮಾನತೆಯ ಸಾರವನ್ನು ಸಾರಿದವರು ಹಾಗು ಕಾವಿ ಒಟ್ಟೆಗೆ ಇಡೀ ವಿಶ್ವದಲ್ಲಿ ಗೌರವ ತಂದುಕೊಟ್ಟವರಲ್ಲಿ ಮೊದಲಿಗರು ಸಿದ್ದಗಂಗಾ ಶ್ರೀಗಳು ಎಂದರು.

ಶ್ರೀಗಳ ಭಕ್ತ ಬಳಗದ ಅಧ್ಯಕ್ಷ ಕಗ್ಗಲಿ ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಧನಲಕ್ಷ್ಮಿ, ಟಿ.ಆರ್.ಕೃಷ್ಣಪ್ಪ, ಜೆ.ಎಸ್.ಚಂದ್ರಪ್ಪ, ಎಂ.ಎಸ್.ಉಮೇಶ್, ಎಂ.ವೈ.ನಾಗರಾಜ್, ಲೀಲಾ ಶಂಕರ್, ಜೆ.ಜಿ.ಸದಾನಂದ ಜಂಬಳ್ಳಿ, ಸತೀಶ ಹೆಗಡೆ ಆರ್.ಡಿ.ಶೀಲಾ, ಆರ್.ರಾಘವೇಂದ್ರ, ಇನ್ನಿತರರು ಮಾತನಾಡಿದರು. ಸೋಮಶೇಖರ ದೂನ ಸ್ವಾಗತಿಸಿದರು. ಚಿಗುರು ಶ್ರೀಧರ ವಂದಿಸಿದರು.


ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ತ್ರಿಮೂರ್ತಿಗಳ ಕಂಚಿನ ಪ್ರತಿಮೆ ಸ್ಥಾಪನೆಗೆ ಶಾಂತವೇರಿ ಟ್ರಸ್ಟ್ ಆಗ್ರಹ

ರಿಪ್ಪನ್‌ಪೇಟೆ ; ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಮಲೇರಿಯಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಸೀನಿಯರ್ ಸರ್ಜನ್ ಟಿ.ಜೆ. ಮೆಗ್ಗಾನ್ ಮತ್ತು ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡ ಹಾಗೂ ಗೇಣಿ ರೈತರ ಹೋರಾಟ ರುವಾರಿ ಹೆಚ್.ಗಣಪತಿಯಪ್ಪ ಇವರುಗಳ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಶಾಂತವೇರಿಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿ ಕಲ್ಲೂರು ಮೇಘರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಮೀಪದ ಕಲ್ಲೂರು ಗ್ರಾಮದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ಕಾಲ ನಿರಂತರ ಸೇವೆ ಪರಿಗಣಿಸಿ ಮಲೇರಿಯಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ನಿಸ್ವಾರ್ಥವಾಗಿ ಸೇವೆಯೊಂದಿಗೆ ಜನಜಾಗೃತಿಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಹಾಗೂ ನಿಸ್ವಾರ್ಥ ಸೇವೆ ಮನಗಂಡು ಅವರ ಕಂಚಿನ ಪ್ರತಿಮೆಯನ್ನು ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಷ್ಟಾಪಿಸಬೇಕು ಹಾಗೂ ಶಾಂತವೇರಿ ಗೋಪಾಲಗೌಡರ ಪ್ರತಿಮೆಯನ್ನು ಮಕ್ಕಳ ವಾರ್ಡ್ ಬಳಿ ಮತ್ತು ಗೇಣಿ ರೈತರ ದ್ವನಿಯಾಗಿ ಶಿವಮೊಗ್ಗ ಜಿಲ್ಲೆಯವರೇ ಆದ ಹೆಚ್.ಗಣಪತಿಯಪ್ಪ ಇವರ ಪ್ರತಿಮೆಯನ್ನು ಹಳೆ ಆಸ್ಪತ್ರೆಯ ಬಳಿ ಸ್ಥಾಪಿಸುವಂತೆ ಒತ್ತಾಯಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಹೆಚ್.ಎಂ.ಸಂಗಯ್ಯ, ಶಂಕರನಾಯ್ಕ್ ಚಿಕ್ಕಮಣತಿ, ಏಲಕ್ಕಿಕೊಪ್ಪ ವೈ.ಟಿ.ನಾಗರಾಜ್, ಕಲ್ಲೂರು ಈರಪ್ಪ, ವಿಶ್ವನಾಥ, ಕೆ.ಎನ್. ಗಂಗಾಧರ, ಕಲ್ಲೂರು ಆದರ್ಶ ಇನ್ನಿತರರು ಹಾಜರಿದ್ದರು.

Leave a Comment