RIPPONPETE ; 69ನೇ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಭರದ ಸಿದ್ಧತೆ

Written by malnadtimes.com

Published on:

RIPPONPETE : 4ನೇ ವರ್ಷದ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್‌ರಾಜ್ ಅಭಿಮಾನಿ ಬಳಗದ 69ನೇ ರಾಜ್ಯೋತ್ಸವ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಭರದ ಸಿದ್ದತೆಯಲ್ಲಿ ತೊಡಗಿರುವುದಾಗಿ ಕಸ್ತೂರಿ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಆರ್.ಎ.ಚಾಬುಸಾಬ್ ಮತ್ತು ರಾಜ್ಯೋತ್ಸವ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮಿ ಜಂಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಕುವೆಂಪು ಸಭಾಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಕ್ಟೋಬರ್ 29 ರಂದು ಮಹಿಳೆಯರಿಗಾಗಿ `ಚುಕ್ಕಿರಂಗೋಲಿ ಬಣ್ಣ ತುಂಬುವ ಸ್ಪರ್ಧೆ, ಆರತಿ ತಟ್ಟೆ ಅಲಂಕಾರ ಸ್ಪರ್ಧೆ, ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾವಳಿ, ಸಂಗೀತ ಕುರ್ಚಿ ಸ್ಪರ್ಧೆ ಮತ್ತು ಒಂದು ನಿಮಿಷದ ವಿಶೇಷ ಸ್ಪರ್ಧೆ ಹಾಗೂ ಪುರುಷರಿಗಾಗಿ ವಾಲಿಬಾಲ್ ಪಂದ್ಯಾವಳಿ ಹಾಗೂ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದಂದು ತಾಯಿ ಭುವನೇಶ್ವರಿ ತಾಯಿ ಮೆರವಣಿಗೆ ಸ್ಥಳೀಯ ಜಾನಪದ ಕಲಾತಂಡಗಳ ಮೆರಗಿನೊಂದಿಗೆ ಶಾಲಾ ಮಕ್ಕಳ ಮೆರವಣಿಗೆ ನಡೆಯಲಿದೆ.

ಜೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಕು|| ದಿಯಾ ಹೆಗಡೆ, ಎದೆ ತುಂಬಿ ಹಾಡುವೆನು ಖ್ಯಾತಿಯ ಸಾನ್ವಿ ಜಿ.ಭಟ್, ಜಾನಪದ ಕಲಾವಿದರಾದ ಮೆಹಬೂಬ್‌ಸಾಬ್, ಜೋಗಿ ಪದದ ಗಾಯಕ ನಾಗರಾಜ ತೊಂಬ್ರಿ ಇವರ ರಸಮಂಜರಿ ಕಾರ್ಯಕ್ರಮದೊಂದಿಗೆ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರೊಂದಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಶೇಕಡಾ 90ಕ್ಕೂ ಹೆಚ್ಚು ಅಂಕ ಗಳಿಸಿ ಉತ್ತೀರ್ಣಾರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕನ್ನಡ ಭಾಷೆಯಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಪ್ರತಿಕಾಗೋಷ್ಟಿಯಲ್ಲಿ ಕಸ್ತೂರಿ ಕನ್ನಡ ಸಂಘದ ಪದಾಧಿಕಾರಿಗಳಾದ ಮಹಮ್ಮದ್‌ಹುಸೇನ್ ಜಿ.ಎಸ್.ವರದರಾಜ್, ಮೆಣಸೆ ಆನಂದ, ತರಕಾರಿ ಯೋಗೇಂದ್ರಗೌಡ, ಶ್ವೇತಾ, ಆರ್.ಡಿ.ಶೀಲಾ, ಶ್ರೀಧರ, ಗಣಪತಿ ಗವಟೂರು, ಹೆಚ್.ಎನ್.ಉಮೇಶ, ರಮೇಶ ಫ್ಯಾನ್ಸಿ, ಹೇಮಾ ಮಂಜಪ್ಪ, ಸೀಮಾ, ನಿರ್ಮಲ, ಇನ್ನಿತರರು ಹಾಜರಿದ್ದರು.

Leave a Comment