ಶಿವಮೊಗ್ಗ ; ಒಂದು ಅಂಕಕ್ಕಾಗಿ ಮತ್ತೊಮ್ಮೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಎದುರಿಸಿ 625ಕ್ಕೆ 625ಕ್ಕೆ ಅಂಕ ಪಡೆದು ಶಿವಮೊಗ್ಗದ ವಿದ್ಯಾರ್ಥಿನಿ ವಿಶೇಷ ಸಾಧನೆ ಮಾಡಿದ್ದಾಳೆ.
ಆದಿಚುಂಚನಗಿರಿ ಪ್ರೌಢ ಶಾಲೆಯ ಸಂಜನಾ ಎಸ್ ಮೊದಲ ಪರೀಕ್ಷೆಯಲ್ಲಿ 624 ಅಂಕ ಪಡೆದಿದ್ದಳು. ಬಯಲಾಜಿಯಲ್ಲಿ ಒಂದು ಅಂಕ ಕಟ್ ಆಗಿತ್ತು. “ಥ ಇನ್ಫರ‍್ಮೇಶನ್ ಸೋರ್ಸ್ ಫಾರ್ ಮೇಕಿಂಗ್ ಪ್ರೋಟಿನ್ ಇನ್ ದ ಸೆಲ್ಸ್ ಇಸ್” ಎಂಬ ಬಹು ಆಯ್ಕೆಯ ಪ್ರಶ್ನೆಗೆ ಕೇಳಲಾಗಿತ್ತು. ಅದಕ್ಕೆ ಜೀನ್, ಕ್ರೋಮೋಜೋಮ್, ಡಿಎನ್‌ಎ, ರೈಬೊಝೋಮ್ ಎಂಬ ನಾಲ್ಕು ಆಯ್ಕೆ ಇತ್ತು. ಜೀನ್ ಸಹ ಪ್ರೋಟಿನ್ ಸೆಲ್ ಎಂದು ಸಂಜನಾ ಉತ್ತರ ನೀಡಿದ್ದಳು. ಆದರೆ ಸರಿಯಾದ ಉತ್ತರ ಡಿಎನ್‌ಎ ಎಂದಿತ್ತು. ಜೀನ್ ಸಹ ಸರಿ ಉತ್ತರ ಎಂಬುದು ಅನೇಕರ ವಾದ. ಆದರೂ ಒಂದು ಅಂಕದಿಂದ ರಾಜ್ಯಕ್ಕೆ ಟಾಪರ್ ಆಗುವ ಅವಕಾಶದಿಂದ ವಂಚಿತಳಾದ ಸಂಜನಾ ಮತ್ತೆ ಬಯಾಲಾಜಿ ಪರೀಕ್ಷೆ ಬರೆದು 80ಕ್ಕೆ 80 ಅಂಕ ಪಡೆದಿದ್ದಾಳೆ. ಈ ಮೂಲಕ 625ಕ್ಕೆ 625ಕ್ಕೆ ಅಂಕ ಪಡೆದು ಸಾಧನೆ ಮಾಡಿದ್ದಾಳೆ.

ಸಂಜನಾ ತಂದೆ ಸುರೇಶ್.ಎಂ ಪೊಲೀಸ್ ಇಲಾಖೆಯಲ್ಲಿ ಎಸ್‌ಎಸ್‌ಐ ಕೆಲಸ ಮಾಡುತ್ತಿದ್ದ ತಾಯಿ ರೇಖಾ.ಎಸ್ ಗೃಹಿಣಿಯಾಗಿದ್ದಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.