ಹೊಸನಗರ ; ಪ್ರತಿವರ್ಷದಂತೆ ದೇಶಾದ್ಯಂತ ಜಿಲ್ಲೆಗೊಂದು ಸರ್ಕಾರಿ ಶಾಲೆಯನ್ನು ಪಿಎಂಶ್ರೀ ಶಾಲೆಯನ್ನಾಗಿ ರೂಪಿಸುವ ಕೇಂದ್ರ ಸರ್ಕಾರದ ಯೋಜನೆಗೆ ಈ ಬಾರಿ ತಾಲೂಕಿನ ಮೇಲಿನಬೆಸಿಗೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಶಾಲೆ ಆಯ್ಕೆಯಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಂಡು ಐದು ವರ್ಷಗಳು ಸಂದ ಹಿನ್ನಲೆಯಲ್ಲಿ ನವದೆಹಲಿಯಲ್ಲಿ ಮಂಗಳವಾರ ಅ
ಆಯೋಜಿಸಿದ್ದ ಭಾರತ ಶಿಕ್ಷಣ ಸಮ್ಮೇಳನವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಉದ್ಘಾಟನೆ ಮಾಡಿ ಶಿಕ್ಷಣ ಇಲಾಖೆಯ ಸಹೋದ್ಯೋಗಿಗಳೊಂದಿಗೆ ಯೂಟ್ಯೂಬ್ ಮೂಲಕ ಮಾತನಾಡಿದರು.
ಶಾಲೆಯ ಸ್ಮಾರ್ಟ್ ಕ್ಲಾಸ್ ಸಭಾಂಗಣದಲ್ಲಿ ಯೂಟ್ಯೂಬ್ ಮೂಲಕ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ (ಆಡಳಿತ) ಮಂಜುನಾಥ, ಹೆಚ್.ಆರ್.ಕೃಷ್ಣಮೂರ್ತಿ (ಅಭಿವೃದ್ಧಿ), ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯೆ ಜ್ಯೋತಿ ನಾಗರಾಜ್, ತಾಲೂಕು ಪಂಚಾಯತಿ ಇಒ ನರೇಂದ್ರ ಕುಮಾರ್, ಬಿಇಒ ಚೇತನಾ, ಉಪ ಸಮನ್ವಯ ಅಧಿಕಾರಿ ಎಂ.ರಂಗನಾಥ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಕೆ.ಸುರೇಶ್, ಉಪಾಧ್ಯಕ್ಷೆ ನಾಗರತ್ನ, ಮುಖ್ಯ ಶಿಕ್ಷಕ ಗುರುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದು ವೀಕ್ಷಿಸಿದರು. ಶಿಕ್ಷಕ ಧರ್ಮಪ್ಪ ಸರ್ವರನ್ನು ಸ್ವಾಗತಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.