ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಶ್ರೀ ಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಅನ್ನಪೂರ್ಣೇಶವರಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಆಯುಧ ಪೂಜೆ ಹಾಗೂ ವಿಜಯದಶಮಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ `ಚಂಡಿಕಾ ಹೋಮ’ ಇನ್ನಿತರ ಪೂಜಾ ಕೈಂಕರ್ಯಗಳು ಸಂಭ್ರಮಾಚರಣೆಯೊಂದಿಗೆ ಸಂಪನ್ನಗೊಂಡಿತು.
ದೇವಸ್ಥಾನದ ಪ್ರಧಾನ ಅರ್ಚಕ ಗುರುರಾಜ ಭಟ್ ಇವರ ನೇತೃತ್ವದಲ್ಲಿ ನಿತ್ಯ ಅಮ್ಮನವರ ಸನ್ನಿಧಾನದಲ್ಲಿ ಚಂಡಿಕಾ ಪಾರಾಯಣ ಮತ್ತು ವಿಶೇಷ ಪೂಜಾ ಕಾರ್ಯಗಳು ನಡೆದು ವಿಜಯ ದಶಮಿಯಂದು ಲೋಕಕಲ್ಯಾಣಾರ್ಥವಾಗಿ “ಚಂಡಿಕಾ ಹೋಮ’’ ನಂತರ ತೀರ್ಥಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಸಂಜೆ ಸಿದ್ದಿವಿನಾಯಕ ಸ್ವಾಮಿಯ ರಥೋತ್ಸವ ಜರುಗಿತು.

ಶ್ರೀ ಸ್ವಾಮಿಯ ರಥೋತ್ಸವವು ದೇವಸ್ಥಾನದಿಂದ ಹೊರಟು ಹಿಂಭಾಗದ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ದೇವಸ್ಥಾನದ ಧರ್ಮದರ್ಶಿ ಸಮಿತಿಯವರು ಅಂಬುಛೇದನಗೊಳಿಸಿ ಬನ್ನಿ ಪತ್ರೆಯನ್ನು ಪರಸ್ಪರ ವಿನಮಯ ಮಾಡಿಕೊಳ್ಳುವುದರೊಂದಿಗೆ ಬನ್ನಿಕೊಟ್ಟು ಬಂಗಾರದಂತಾಗಲಿ ಎಂದು ಶುಭಹಾರೈಸಿಕೊಂಡ ದೃಶ್ಯ ವಿಶೇಷವಾಗಿತ್ತು.
ನಂತರ ಉತ್ಸವವು ವಿನಾಯಕ ವೃತ್ತದವರೆಗೆ ತೆರಳಿ ವಾಪಾಸ್ ದೇವಸ್ಥಾನಕ್ಕೆ ಮರಳಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು, ಭಕ್ತ ಸಮೂಹ ಪಾಲ್ಗೊಂಡಿದ್ದರು.
ಹುಂಚದಲ್ಲಿ ಶ್ರಮದಾನ :
ರಿಪ್ಪನ್‌ಪೇಟೆ ; ಮಹಾತ್ಮ ಗಾಂಧಿಜೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಹುಂಚ ಸ್ವಗ್ರಾಮ ಹಿತರಕ್ಷಣಾ ವೇದಿಕೆಯ ಯುವಕರು ಹುಂಚ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಸ್ಪತ್ರೆಯ ಮುಂಭಾಗದ ಪ್ರಯಾಣಿಕರ ಬಸ್ ನಿಲ್ದಾಣ ಮತ್ತು ಪಶು ಆಸ್ಪತ್ರೆಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.

ಈ ಸಂದರ್ಭದಲ್ಲಿ ಸ್ವಗ್ರಾಮ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮತ್ತು ಇನ್ನಿತರ ಸಂಗ ಸಂಸ್ಥೆಯ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.