SHIVAMOGGA | ಪ್ರತಿನಿತ್ಯ ಜನರ ಜೀವ ಉಳಿಸಲು ಸೇವೆ ಸಲ್ಲಿಸುವ, ಒಂದೊಳ್ಳೆ ಕಾಯಕದಲ್ಲಿ ತೊಡಗಿರುವಂತಹ, ಆಶಾ ಕಾರ್ಯಕರ್ತೆ ರೇಖಾ (35) ಮೊನ್ನೆ ನಡೆದ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದೆ ಅದರಿಂದ ತಲೆಯ ಪ್ರಮುಖ ನರ ತುಂಡಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಪತಿ ಕೂಲಿ ಕೆಲಸ ಮಾಡಿ ಮನೆ ತೂಗಿಸಿಕೊಂಡು ಹೋಗುತ್ತಿದ್ದು, ರೇಖಾ ಅವರಿಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಎಲ್ಲೆಡೆ ಡೆಂಗ್ಯೂ ಹರಡಿರುವ ಕಾರಣ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದ ತಂಡದಲ್ಲಿ ರೇಖಾ ಕೂಡ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ದೆಹಲಿಯ ಸಮಾವೇಶದಲ್ಲಿ ರೇಖಾ ಅವರಿಗೆ ಒಳ್ಳೆಯ ಆಶಾ ಕಾರ್ಯಕರ್ತೆ ಅವಾರ್ಡ್ ಕೂಡ ಬಂದಿದೆ.
ಮೊನ್ನೆ ಮಧ್ಯಾಹ್ನ ಮನೆಗೆ ಹೋಗಿ ಪುನಃ ಕೆಲಸಕ್ಕೆ ವಾಪಾಸು ಬರುವಾಗ ಅಪಘಾತ ಸಂಭವಿಸಿ ತೀವ್ರ ರಕ್ತ ಸ್ರಾವ ಆಗಿದೆ. ಕೂಡಲೇ ಸ್ಥಳೀಯರು ನಾರಾಯಣ ಹೃದಯಾಲಯಕ್ಕೆ ಅವರನ್ನು ಕರೆದೊಯ್ದಿದ್ದಾರೆ.
ಅಪಘಾತದಿಂದ ತಲೆಯ ಮುಖ್ಯ ನರ ತುಂಡಾಗಿದ್ದು, ಚಿಕಿತ್ಸೆಗೆ 8 ಲಕ್ಷ ರೂ.ವರೆಗೆ ವೆಚ್ಚ ತಗಲುತ್ತದೆ ಎಂದು ನಾರಾಯಣ ಹೃದಯಾಲಯದ ವೈದ್ಯರು ತಿಳಿಸಿದ್ದಾರೆ.
ಮನೆ ನಡೆಸುವುದೇ ಕಷ್ಟವಾಗಿರುವ ಇಂತಹ ಪರಿಸ್ಥಿತಿಯಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯ ಇಲ್ಲದೆ ಜನರ ಜೀವ ಉಳಿಸುವ ಕಾಯಕ ಮಾಡುತ್ತಿರುವ ರೇಖಾಗೆ ವಿಧಿ ಇಂದು ಇಂತಹ ಸ್ಥಿತಿ ತಂದಿದೆ. ಆಸ್ಪತ್ರೆಗೆ ಸೇರಿಸಿದ ನಂತರ ರೇಖಾ ಜೊತೆಗಿನ ಆಶಾ ಕಾರ್ಯಕರ್ತರು ಹಣ ಹೊಂದಿಸಲು ಶ್ರಮಪಡುತ್ತಿದ್ದಾರೆ. ಇದು ನಿಜಕ್ಕೂ ಪುಣ್ಯದ ಕೆಲಸ. ರೇಖಾ ಬದುಕಲು ಚಿಕಿತ್ಸೆಗೆ ಲಕ್ಷಾಂತರ ಹಣ ಹೊಂದಿಸಬೇಕಾಗಿದೆ. ಅದಕ್ಕಾಗಿ ಶ್ರಮ ಪಡುತ್ತಿರುವ ಆಶಾ ಕಾರ್ಯಕರ್ತೆಯರ ಜೊತೆಗೆ ದಾನಿಗಳು ಕೈಜೋಡಿಸಬೇಕಾಗಿದೆ. ಜೊತೆಗೆ ಪ್ರಮುಖವಾಗಿ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಮುಂದೆ ಬಂದು ಆಕೆಯ ಬದುಕಿಗೆ ದಾರಿ ದೀಪವಾಗಬೇಕಾಗಿದೆ.
ಜು.12ರವರೆಗೆ ಮುಂದುವರೆಯಲಿದೆ ಭಾರಿ ಮಳೆ, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಹಣ ಸಂದಾಯ ಮಾಡುವವರು ಫೋನ್ ಪೇ, ಗೂಗಲ್ ಪೇ ಮೊಬೈಲ್ 9844157195 ಅಥವಾ ಪತಿ ವಿಶ್ವನಾಥ್ ಬ್ಯಾಂಕ್ ಆಫ್ ಬರೋಡ (ಶಿವಮೊಗ್ಗ) ಅಕೌಂಟ್ ನಂಬರ್ 89270100011322, ಐಎಫ್‌ಎಸಿ ಕೋಡ್ BARBOVJSHSR ಹಣ ಸಂದಾಯ ಮಾಡಲು ಕೋರಲಾಗಿದೆ.