SHIVAMOGGA | ಜಿಲ್ಲೆಯಲ್ಲಿ ಈ ವರ್ಷ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯು ಇಂತಹ ಅನುಮಾನಕ್ಕೆ ಕಾರಣವಾಗಿದೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಪಿ.ಎಸ್.ಟಿ ಮತ್ತು ಜಿ.ಪಿ.ಟಿ ಶಿಕ್ಷಕರ ಅವೈಜ್ಞಾನಿಕ ಹಂಚಿಕೆ ಒಂದು ಕಡೆಯಾಗಿದ್ದರೆ, ಇನ್ನೊಂದು ಕಡೆ ನೇಮಕಾತಿಯೇ ಆಗಿರದ ಕನ್ನಡ ಜಿ.ಪಿ.ಟಿ ಶಿಕ್ಷಕರ ಹುದ್ದೆಗಳನ್ನು ಮಾತ್ರ ತೋರಿಸಿ 3 ದಿನಗಳ ವರ್ಗಾವಣೆಯ ನಾಟಕವನ್ನು ಇಲಾಖೆ ಮುಗಿಸಿದೆ.
ವರ್ಗಾವಣೆಯನ್ನು ಬಯಸಿ ಬಂದ ಶಿಕ್ಷಕರು ಕೆಲವು ಸಮಯ ವರ್ಗಾವಣೆ ಪ್ರಕ್ರಿಯೆಯನ್ನು ತಡೆಹಿಡಿದರು ಪ್ರಯೋಜನವಾಗಲಿಲ್ಲ. ಜಿಲ್ಲೆಯಲ್ಲಿ 250 ಕ್ಕಿಂತ ಹೆಚ್ಚು ಕನ್ನಡ ಜಿ.ಪಿ.ಟಿ ಶಿಕ್ಷಕರ ಹುದ್ದೆಗಳನ್ನು ತೋರಿಸಿದ್ದು ಈ ಹುದ್ದೆಗೆ ನೇರ ನೇಮಕಾತಿ ಅಥವಾ ಪಿ.ಎಸ್.ಟಿ ಶಿಕ್ಷಕರಿಗೆ ಮುಂಬಡ್ತಿಯನ್ನು ನೀಡುವ ವಿಚಾರದಲ್ಲಿ ಗೊಂದಲವನ್ನು ಹೊಂದಿದ್ದು ಇದು ಕಲಿಕಾ ಬಲವರ್ಧನೆಗೆ ಮಾರಕವಾಗಿದೆ.

ಜಿಲ್ಲೆಯಲ್ಲಿ ಬೆರಳೆಣಿಕೆಯ ಶಾಲೆಗಳು ಮಾತ್ರ ಇಂಗ್ಲಿಷ್ ಭಾಷಾ ಶಿಕ್ಷಕರನ್ನು ಹೊಂದಿದ್ದು, ಯಾವ ಶಾಲೆಯಲ್ಲೂ ಇಂಗ್ಲಿಷ್ ಶಿಕ್ಷಕರ ಹುದ್ದೆಗಳನ್ನು ತೋರಿಸದಿರುವುದು ಖಾಸಗಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸುವ ಹುನ್ನಾರವಾಗಿದೆ.
ನಿಗದಿತ ಅರ್ಹತೆಯನ್ನು ಹೊಂದಿದ್ದರು ತಮಗೆ ಬಡ್ತಿ ನೀಡುವ ಬದಲು ಹಿಂಬಡ್ತಿಗೆ ಇಳಿಸಿ 1 ರಿಂದ 7ನೇ ತರಗತಿಗೆ ಬೋಧಿಸುವ ನಮ್ಮನ್ನು 1 ರಿಂದ 5ನೇ ತರಗತಿಗೆ ಸೀಮಿತ ಮಾಡಿದ್ದಾರೆಂದು ಪಿ.ಎಸ್.ಟಿ ಶಿಕ್ಷಕರು ಅಳಲನ್ನು ತೋಡಿಕೊಂಡಿದ್ದರೆ, ಇನ್ನೊಂದೆಡೆ ವರ್ಗಾವಣೆಯು ಸಿಗದ ಹತಾಶೆಯಲ್ಲಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಇನ್ನಾದರೂ ಶಿಕ್ಷಣ ಸಚಿವರು ಅಧಿಕಾರಿಗಳಿಗೆ ತಮ್ಮ ಅಧಿಕಾರವನ್ನು ಕೊಟ್ಟು ಕುಳಿತಿರುವ ಬದಲು ಶಿಕ್ಷಕರಿಗೆ ಸಹಕಾರಿಯಾಗಲಿ ಎಂಬುದೇ ಶಿಕ್ಷಕರ ಆಶಯ.
Read more

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.