SHIVAMOGGA | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜುಲೈ 20 ಮತ್ತು 21 ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಸ ಮಾಡಲಿದ್ದಾರೆ.
SORABA :ಮೀನು ಹಿಡಿಯಲು ಹೋದ ವ್ಯಕ್ತಿ ನಾಪತ್ತೆ !
ಎಲ್ಲಿಗೆಲ್ಲ ಭೇಟಿ ನೀಡಲಿದ್ದಾರೆ ?
- ಜು.20 ರಂದು ಸಂಜೆ 5.00ಕ್ಕೆ ಸೊರಬಕ್ಕೆ ಆಗಮಿಸಲಿರುವ ಸಚಿವರು ಕಡಸೂರು, ವರದಾ ನದಿ ಚೋಳದಗುಡ್ಡೆ ಮತ್ತು ಬಂಕಸಾಣ ಹೊಳೆ ಹತ್ತಿರ ಪ್ರವಾಹ ವೀಕ್ಷಣೆ ಮಾಡುವರು. ರಾತ್ರಿ 9:00ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.
- ಜು. 21 ರಂದು ಬೆ.9:00ಕ್ಕೆ ತಾಳಗುಪ್ಪ ಹೋಬಳಿ ಹಿರೇನೆಲ್ಲೂರು ಗ್ರಾಮದ ಮುಳಗಡೆ ಪ್ರದೇಶಕ್ಕೆ ಭೇಟಿ.
- ಬೆಳಗ್ಗೆ. 9:50ಕ್ಕೆ ಸೈದೂರು ಕನ್ನಹೊಳೆ ಮುಳುಗಡೆ ಪ್ರದೇಶದ ವೀಕ್ಷಣೆ
- ಬೆ.10:30ಕ್ಕೆ ಮಂಡಗಳಲೆ ಕಾಳಜಿ ಕೇಂದ್ರಕ್ಕೆ ಭೇಟಿ.
- ಬೆ.11:15ಕ್ಕೆ ಸಾಗರ ನಗರದಲ್ಲಿ ಮಳೆಯಿಂದ ಹಾನಿಯಾದ ಮನೆ ವೀಕ್ಷಣೆ.
- ಮ.12:20ಕ್ಕೆ ಹೊಸನಗರ ತಾಲೂಕು ಮಾರುತಿಪುರ ಗ್ರಾಮದಲ್ಲಿ ಎನ್.ಹೆಚ್-766ಸಿ ರಸ್ತೆ ಹಾನಿ ವೀಕ್ಷಣೆ.
- ಮ.1:20ಕ್ಕೆ ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಹಾಗೂ ಪತ್ರಿಕಾಗೋಷ್ಠಿ ನಡೆಸಲಿರುವರು.
- ಮಧ್ಯಾಹ್ನ 3:30ಕ್ಕೆ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಗುಡ್ಡ ಕುಸಿದು ತಡೆಗೋಡೆ ಹಾನಿಯಾದ ಪ್ರವೇಶ ವೀಕ್ಷಸಲಿದ್ದಾರೆ.
Malenadu Rain | ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?
ಸಂಜೆ 5:00ಕ್ಕೆ ತೀರ್ಥಹಳ್ಳಿಯಿಂದ ರಸ್ತೆ ಮುಖಾಂತರ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.