ಮತ್ತೆ ಸಂಸದರಾದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ಜನರಿಗೆ ಗುಡ್ ನ್ಯೂಸ್ ನೀಡಿದ ಸಂಸದ ರಾಘವೇಂದ್ರ ! ಏನದು ?

Written by malnadtimes.com

Published on:

SHIVAMOGGA | ಸಂಸದ ಬಿ.ವೈ. ರಾಘವೇಂದ್ರ (B.Y.Raghavendra) ಅವರು ಮತ್ತೆ ಸಂಸದರಾದ ಬೆನ್ನಲ್ಲೇ ಜಿಲ್ಲೆಯ ಜನರಿಗೆ ಗುಡ್ ನ್ಯೂಸ್ ನೀಡಿದ್ದು, ಶಿವಮೊಗ್ಗ-ಚೆನ್ನೈ ನಡುವೆ ನೂತನ ರೈಲು (Railways) ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸಿ ಅಭಿವೃದ್ಧಿಗೆ ಆದ್ಯತೆ ನೀಡುವೆ : ಸಂಸದ ಬಿ.ವೈ. ರಾಘವೇಂದ್ರ

ಈ ಕುರಿತಂತೆ ಮಾತನಾಡಿರುವ ಅವರು, ಶಿವಮೊಗ್ಗ-ಚೆನ್ನೈ ನಡುವೆ ನೂತನ ಸೆಮಿಫಾಸ್ಟ್ ರೈಲು ಸಂಚಾರಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ ತೋರಿದ್ದಾರೆ ಎಂದರು.

Shivamogga town
Shivamogga town

ಎಂದಿನಿಂದ ಆರಂಭ ? ಸಮಯವೇನು ?

ಈ ನೂತನ ರೈಲು ಸಂಚಾರ ಆರಂಭಕ್ಕೆ ದಿನಾಂಕ ಇನ್ನೂ ನಿಗದಿಯಾಗಬೇಕಿದ್ದು, ಅತಿ ಶೀಘ್ರದಲ್ಲೇ ಸಂಚಾರ ಆರಂಭವಾಗಲಿದೆ. ಇನ್ನು, ಈ ರೈಲು ಪ್ರತಿದಿನ ಸಂಚರಿಸಲಿದೆ.

ಶಿವಮೊಗ್ಗದಿಂದ ಸಂಜೆ 4 ಗಂಟೆಗೆ ಹೊರಡಲಿದ್ದು ಬೆಳಗಿನಜಾವ 4-45 ಗೆ ಚೆನ್ನೈ ತಲುಪಲಿದೆ. ರಾತ್ರಿ 11-30 ಹೊರಟು ಮರುದಿನ 12 ಗಂಟೆಗೆ ಶಿವಮೊಗ್ಗ ತಲುಪಲಿದೆ. ಬೆಂಗಳೂರು ಪೇಟೆ, ಚೋಳಾರು ಗುಂಟೆಯ ಮೇಲೆ ಚೆನ್ನೈ ತಲುಪಲಿದೆ.

ಹೊಸನಗರದಲ್ಲಿ ಕೆಡಿಪಿ ಸಭೆ | ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಆರೋಗ್ಯ ಇಲಾಖೆಯವರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ; ಶಾಸಕ ಬೇಳೂರು

Leave a Comment