SHIVAMOGGA / CHIKKAMAGALURU | ಮಲೆನಾಡಿನಾದ್ಯಂತ ಆರಿದ್ರಾ ಮಳೆ ಅಬ್ಬರ ಜೋರಾಗಿದೆ. ಕಳೆದೆರಡು ದಿನಗಳಿಂದ ಬಿಟ್ಟು ಬಿಡದೆ ಧಾರಾಕಾರವಾಗಿ ಮಳೆ (Heavy Rain) ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಮಳೆ ಜೋರಾಗಿದ್ದು ಹಲವೆಡೆ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
Read More :ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಭಾರಿ ವರ್ಷಧಾರೆ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
ಇನ್ನೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್.ಆರ್. ಪುರ ತಾಲೂಕಿನಾದ್ಯಂತ ಮಳೆರಾಯ ಅಬ್ಬರಿಸುತ್ತಿದ್ದಾನೆ.
ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ ವಿವರ ಹೀಗಿದೆ.
ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :
- ಮಾಸ್ತಿಕಟ್ಟೆ (ಹೊಸನಗರ) : 118
- ಹುಲಿಕಲ್ (ಹೊಸನಗರ) : 117
- ಯಡೂರು (ಹೊಸನಗರ) : 86
- ಬಿದರಗೋಡು (ತೀರ್ಥಹಳ್ಳಿ) : 82
- ಅರೇಹಳ್ಳಿ (ತೀರ್ಥಹಳ್ಳಿ) : 75.5
- ಮಾಣಿ (ಹೊಸನಗರ) : 74
- ಹೊಸೂರು-ಸಂಪೆಕಟ್ಟೆ (ಹೊಸನಗರ) : 67.5
- ಬಿದನೂರುನಗರ (ಹೊಸನಗರ) : 64
- ಹೊಸಳ್ಳಿ (ತೀರ್ಥಹಳ್ಳಿ) : 56
- ಹೊಸನಗರ (ಹೊಸನಗರ) : 57
- ತೀರ್ಥಮತ್ತೂರು (ತೀರ್ಥಹಳ್ಳಿ) : 47
- ನೊಣಬೂರು (ತೀರ್ಥಹಳ್ಳಿ) : 46
- ಮೇಲಿನಬೆಸಿಗೆ (ಹೊಸನಗರ) : 42.5
- ಕೋಳೂರು (ಸಾಗರ) : 39.5
- ಸಾಲ್ಗಡಿ (ತೀರ್ಥಹಳ್ಳಿ) : 38
ಚಿಕ್ಕಮಗಳೂರು (ಮಿ.ಮೀ.ಗಳಲ್ಲಿ) :
- ಬಣಕಲ್ (ಮೂಡಿಗೆರೆ) : 124.5
- ಕಿರುಗುಂದ (ಮೂಡಿಗೆರೆ) : 95
- ಹೊರನಾಡು (ಕಳಸ) : 88
- ಬೇಗಾರು (ಶೃಂಗೇರಿ) : 83
- ಧರೆಕೊಪ್ಪ (ಶೃಂಗೇರಿ) : 77.5
- ಬಾಳೂರು (ಮೂಡಿಗೆರೆ) : 77.5
- ವಿದ್ಯಾರಣ್ಯಪುರ (ಶೃಂಗೇರಿ) : 92.5
- ಬೆಟ್ಟಗೆರೆ (ಮೂಡಿಗೆರೆ) : 76.5
- ತೋಟದೂರು (ಕಳಸ) : 75.5
- ಶಾನುವಳ್ಳಿ (ಕೊಪ್ಪ) : 72
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಹೆಚ್ಚಳ :
ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ಬಾರಿಗಿಂತ 7 ಅಡಿ ನೀರು ಹೆಚ್ಚು ಸಂಗ್ರಹವಾಗಿದ್ದು ಇಂದು ಬೆಳಿಗ್ಗೆ 8:00 ಗಂಟೆಗೆ ಜಲಾಶಯದ ನೀರಿನ ಮಟ್ಟ 1747.60 ಅಡಿ ತಲುಪಿದ್ದು ಜಲಾಶಯಕ್ಕೆ 16984 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೆ ಅವಧಿಗೆ ಜಲಾಶಯದ ನೀರಿನ ಮಟ್ಟ1740.20 ಅಡಿ ದಾಖಲಾಗಿತ್ತು.
Read More : Ganga kalyana ರೈತರಿಗೆ ಶುಭ ಸುದ್ದಿ ,ಗಂಗಾ ಕಲ್ಯಾಣ ಯೋಜನೆ 2024 ಅರ್ಜಿ ಅಹ್ವಾನ!