ಅವೈಜ್ಞಾನಿಕ ಕಾಮಗಾರಿ ಆರೋಪಿಸಿ ರಿಪ್ಪನ್‌ಪೇಟೆ ಟಿ.ಆರ್. ಕೃಷ್ಣಪ್ಪ ವಿನೂತನ ಪ್ರತಿಭಟನೆ

0 627

ರಿಪ್ಪನ್‌ಪೇಟೆ: ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿ ಮಾರ್ಗದ ಬೆನವಳ್ಳಿ ಬಳಿ ಲೋಕೋಪಯೋಗಿ ಇಲಾಖೆಯವರು ನಿರ್ಮಿಸಲಾಗುತ್ತಿರುವ ಮೋರಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆನವಳ್ಳಿ ಬಳಿಯಲ್ಲಿ ನಿರ್ಮಿಸಲಾಗುತ್ತಿರುವ ಮೋರಿ ಕಾಮಗಾರಿಯ ಬಳಿ “ಸ್ವಾತಂತ್ರ್ಯ ಭಾರತ ದೇಶದ ತ್ರಿಮೂರ್ತಿಗಳು’’  ಶಿಕ್ಷಣ ದೇವಾಲಯದ ಶ್ರೀಗುರು ದೇವೋಭವ, ನ್ಯಾಯ ದೇವಾಲಯದ ಶ್ರೀನ್ಯಾಯ ದೇವತೆ, ಆರೋಗ್ಯ ದೇವಾಲಯ ಶ್ರೀ ವೈದ್ಯ ನಾರಾಯಣೋ ಭವ, ಎಂಬ ಘೋಷವಾಕ್ಯದ ಬ್ಯಾನರ್‌ವೊಂದನ್ನು ಅಳವಡಿಸಿ ಈ ಹಿಂದೆ ಇದ್ದಂತಹ ವ್ಯಾಖ್ಯಾನಕ್ಕೆ ತಮ್ಮ ಸ್ಪಷ್ಟಿಕರಣ ನೀಡಿದರು.

ಲೋಕೋಪಯೋಗಿ ಇಲಾಖೆವರು ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸುತ್ತಿದ್ದು ಇದಕ್ಕೆ ಲೋಕೋಪಯೋಗಿ ಅಲೋಪಯೋಗಿ ಇಲಾಖೆ ಗುತ್ತಿಗೆದಾರ ಮತ್ತು ಹಣ ಹೊಡೆಯುವ ಅಧಿಕಾರಿಗಳು ಜನಪ್ರತಿನಿಧಿಗಳು ಎಂಬ ವ್ಯಾಖ್ಯಾನ ನೀಡಿ ಇಲಾಖೆಯ ವಿರುದ್ದ ಲೇವಡಿ ಮಾಡಿದರು.

Leave A Reply

Your email address will not be published.

error: Content is protected !!