ಕ್ರೀಡೆ ಪ್ರತಿಯೊಬ್ಬರಲ್ಲಿಯೂ ಉತ್ತಮ ಆಲೋಚನಾ ಶಕ್ತಿ ಹೆಚ್ಚಿಸುತ್ತದೆ ; ಕಿಮ್ಮನೆ ರತ್ನಾಕರ್

0 553

ರಿಪ್ಪನ್‌ಪೇಟೆ: ಕ್ರೀಡಾಪಟುಗಳು ಸೋಲು-ಗೆಲುವಿನ ಬಗ್ಗೆ ಚಿಂತಿಸದೇ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಹೊರ ಹಾಕಬೇಕು ಆಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಹೇಳಿದರು.

ಕೋಡೂರು ಗ್ರಾಮದಲ್ಲಿ ಆಯೋಜಿಸಲಾದ ಫ್ರೆಂಡ್ಸ್ ಕೋಡೂರು ಮಲೆನಾಡು ಆಟಗಾರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ರವರಿಗೆ ಸನ್ಮಾನಿಸಿ ಮಾತನಾಡಿ, ಕ್ರೀಡೆಯು ಪ್ರತಿಯೊಬ್ಬರಲ್ಲಿಯೂ ಸಾಮರ್ಥ್ಯ ಮತ್ತು ಸಮಾನತೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತಿದೆ. ಯುವಕರಲ್ಲಿ ಸಹೋದರತ್ವವನ್ನು ಬೆಳಸಲು ಕ್ರೀಡೆ ಉತ್ತಮ ಸಾಧನವಾಗಿದೆ ಎಂದ ಅವರು, ಜನಸೇವಕರಿಗೆ ಆಧಿಕಾರಾವಧಿಯಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶಗಳು ದೊರಕುತ್ತವೆ ಆದನ್ನು ಸಮರ್ಥವಾಗಿ ನಿರ್ವಹಿಸುವ ಮನೋಭಾವನೆ ಮುಖ್ಯವಾಗಿದ್ದು ಆ ಕಾರಣ ಜಿಲ್ಲಾ ಪಂಚಾಯ್ತಿನ ಸದಸ್ಯರಾಗಿ ಸತತ ನಾಲ್ಕು ಬಾರಿ ಗೆಲುವು ಸಾಧಿಸುವುದರೊಂದಿಗೆ ಜನಮನ್ನಣೆ ಗಳಿಸುವಲ್ಲಿ ಕಲಗೋಡು ರತ್ನಾಕರ್ ಯಶಸ್ವಿನಾಯಕರಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದಿಂದ ಕೊಡಮಾಡುವ ಡಾ.ಚಿಕ್ಕಕೊಮರಿಗೌಡ ದತ್ತಿ ಪ್ರಶಸ್ತಿಗೆ ಭಾಜನರಾದ ಕಲಗೋಡು ರತ್ನಾಕರ್ ಇವರನ್ನು ಕೋಡೂರು ಗ್ರಾಮಸ್ಥರು, ಫ್ರೆಂಡ್ಸ್ ಮಲೆನಾಡು ಆಟಗಾರ ಲೀಗ್ ಸಂಸ್ಥೆಯವರು ಸನ್ಮಾಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಗೋಡು ರತ್ನಾಕರ್, ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ನಂತರ ಹಿಂದೆ ನೋಡದೆ ಮುಂದೆ ಬರುವಂತೆ ಮಾಡಿರುವ ಕ್ಷೇತ್ರದ ಮತದಾರ ಋಣವನ್ನು ನಾನು ಎಂದಿಗೂ ಮರೆಯುವಂತಿಲ್ಲ. ಆ ಕಾರಣ ಸಹಾಯ ಬಯಸಿ ಬಂದವರಿಗೆ ಕ್ಷಣವೂ ವಿಳಂಬ ಮಾಡದೇ ಅವರ ಸಮಸ್ಯೆಗೆ ಸ್ಪಂದಿಸುತ್ತಾ ಬಂದಿರುತ್ತೇನೆಂದು ಹೇಳಿ, ಈಗಾಗಲೇ ಶಿಕ್ಷಣ ಸಚಿವರು ಕೆಪಿಎಸ್ ಸ್ಕೂಲ್ ನೀಡುವ ಘೋಷಣೆ ಮಾಡಿದ್ದು ಅದನ್ನು ಕೋಡೂರಿನಲ್ಲಿ ಆರಂಭಿಸುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಆಸ್ಪತ್ರೆ ಮತ್ತು ಅಂಬೇಡ್ಕರ್ ವಸತಿ ಶಾಲೆ ಹೀಗೆ ಅಭಿವೃದ್ಧಿಯನ್ನು ತಂದಿರುವ ತೃಪ್ತಿ ನನಗಿದೆ ಎಂದರು.

ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿ, ಕೋಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ ಕಲಗೋಡು, ಉಪಾಧ್ಯಕ್ಷ ಸುಧಾಕರ್, ಸದಸ್ಯ ಜಯಪ್ರಕಾಶ್, ಮಂಜಪ್ಪ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ವೈ.ಜಯಂತ್, ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ವೇದಾಂತ್‌ಗೌಡ, ರಾಮಪ್ಪ, ಲಕ್ಷ್ಮಿ ಮನ್ನಾಡ್‌ ಬೇಕರಿ ಪ್ರದೀಪ್, ರಂಜಿತ್, ವಿಕಾಸ್ ಕುನ್ನೂರು, ಪುರುಷೋತ್ತಮ್, ಅಮರನಾಥಶೆಟ್ಟಿ, ಕೃಷಿ ಪತ್ತಿನ ಸಹಕಾರ ಸಂಘದ ಸುಬ್ಬಣ್ಣ, ವಾಸುದೇವ್ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!