ರಕ್ತದಾನಕ್ಕೆ ಸಾರ್ವಜನಿಕರು ಕೈ ಜೋಡಿಸಲಿ ; ಪಿಎಸ್‌ಐ ನಾಗರಾಜ್ ಮನವಿ

0 37


ಹೊಸನಗರ : ರಕ್ತದಾನದ ಮಹತ್ವ ಅರಿಯುವ ಮೂಲಕ ಅರ್ಹ ಆರೋಗ್ಯವಂತ ವ್ಯಕ್ತಿಗಳು ದೃತಿಗೆಡದೆ ರಕ್ತದಾನದಂತಹ ಮಹತ್ಕಾರ್ಯಕ್ಕೆ ಕೈಜೊಡಿಸಬೇಕೆಂದು ನಗರ ಪೊಲೀಸ್ ಠಾಣೆ ಪಿಎಸ್‌ಐ ನಾಗರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.


ತಾಲೂಕಿನ ಮೂಡುಗೊಪ್ಪ (ನಗರ) ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಮೆಗ್ಗಾನ್ ರಕ್ತನಿಧಿ ಕೇಂದ್ರ, ಮೂಡುಗೊಪ್ಪ ಗ್ರಾಮ ಪಂಚಾಯತಿ, ನಗರ ಸಂಯುಕ್ತ ಆಸ್ಪತೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರವನ್ನು ಸ್ವಯಂ ರಕ್ತದಾನ ಮಾಡುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.


ನೀವು ನೀಡಿದ ರಕ್ತವು ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ವ್ಯಕ್ತಿಗಳ ಜೀವ ಉಳಿಸಲು ವರದಾನವಾಗಲಿದೆ. 50 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ವರ್ಷದಲ್ಲಿ 2 ಬಾರಿ ರಕ್ತದಾನ ಮಾಡಬಹುದು. ಇದರಿಂದ ಹೃದಯಘಾತ, ರಕ್ತದೊತ್ತಡ, ಲಿವರ್ ಸಮಸ್ಯೆಗಳಿಂದ ಮುಕ್ತಿ ಕಾಣಬಹುದಾಗಿದೆ ಎಂದರು.


ನಗರದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಮೊತ್ತದ ಒಟ್ಟು 120 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ, ಸಿಪಿಐ ಗಿರೀಶ್ ಅವರ ಮಾರ್ಗದರ್ಶನ, ನಗರ ಪಿಎಸ್‌ಐ ನಾಗರಾಜ್ ಅವರ ನೇತೃತ್ವದಲ್ಲಿ 38 ಬಾರಿ ರಕ್ತದಾನ ಮಾಡಿರುವ ಪರಿಸರ ಪ್ರೇಮಿ ಹೆಡ್‌ಕಾನ್‌ಸ್ಟೇಬಲ್ ಹಾಲೇಶಪ್ಪ ಮುಂದಾಳತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು.

ಗ್ರಾಮ ಪಂಚಾಯತಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಆದರ್ಶ ಹೆರಟೆ. ಸಿಬ್ಬಂದಿಗಳಾದ ಹೆಡ್‌ಕಾನ್‌ಸ್ಟೇಬಲ್ ವೆಂಕಟೇಶ್, ಪ್ರವೀಣ್, ಅರುಣೋದಯ, ವಿಶ್ವನಾಥ್ ದೇವಾಡಿಗ, ಶಾಂತಪ್ಪ ಶಿಬಿರದಲ್ಲಿ ಪಾಲ್ಗೊಂಡು ಸಹಕಾರ ನೀಡಿದರು.

Leave A Reply

Your email address will not be published.

error: Content is protected !!