ಹೊಸನಗರ ಪಪಂ ವ್ಯಾಪ್ತಿಯಲ್ಲಿ ಸುಮಾರು 600 ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ

0 127


ಹೊಸನಗರ : ಪಟ್ಟಣ ಪಂಚಾಯತಿಯ 11 ವಾರ್ಡ್‌ಗಳ ಮಹಿಳೆಯರು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಡಿಯಲ್ಲಿ ಸುಮಾರು 600 ಮಹಿಳೆಯರು ಕೇವಲ ಸೋಮವಾರರಿಂದ ಶನಿವಾರದವರೆಗೆ ಅರ್ಜಿ ನೋಂದಾಯಿಸಿದ್ದಾರೆ.


ಹೊಸನಗರ ಪಟ್ಟಣ ಪಂಚಾಯತಿಯ ಎಲ್ಲ ಸದಸ್ಯರ ಸಹಕಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ನೋಡಲ್ ಅಧಿಕಾರಿ ಪ್ರಶಾಂತ್, ಸುಮಿತ್ರಾ, ರಾಧ, ಡಾಡಾ ಎಂಟ್ರಿ ಕುಮಾರಿ, ಯಶೋಧಮ್ಮ, ಚಂದ್ರಪ್ಪನವರು ಬೆಳಿಗ್ಗೆ 8 ಗಂಟೆಯಿಂದ ಟೋಕನ್‌ಗಳನ್ನು ಪಟ್ಟಣದ ಮಹಳೆಯರಿಗೆ ಎಲ್ಲೂ ಗೊಂದಲವಾಗದಂತೆ ನೀಡಿ ನಂತರ ಗೃಹಲಕ್ಷ್ಮಿ ಅರ್ಜಿ ನೋಂದಾಯಿಸಿಕೊಳ್ಳುತ್ತಿದ್ದಾರೆ.


ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲೂ ಗೊಂದಲವಿಲ್ಲ:

ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 2 ಸಾವಿರ ಗೃಹಿಣಿಯರು ಇರಬಹುದೆಂದು ಅಂದಾಜಿಸಲಾಗಿದ್ದು ಇನ್ನೂ ಒಂದು ವಾರದೊಳಗೆ ಎಲ್ಲಾ ಮಹಿಳೆಯರ ನೋಂದಣಿ ಕಾರ್ಯ ಮುಗಿಯಲಿದೆ ಎಂದು ಹೇಳಲಾಗಿದೆ.


ನೋಂದಣಿಗೆ ಯಾವುದೇ ಹಣ ಪಡೆಯುತ್ತಿಲ್ಲ:

ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಗೃಹಲಕ್ಷ್ಮಿ ನೋಂದಣಿಗೆ ಹಣ ಪಡೆಯುತ್ತಿದ್ದಾರೆ? ಎಂದು ಅಪಪ್ರಚಾರ ಪಡಿಸುತ್ತಿದ್ದು ನಾವು ಇಲ್ಲಿಯವರೆಗೆ ಯಾರಿದಲ್ಲೂ ಗೃಹಲಕ್ಷ್ಮಿ ನೋಂದಣಿಗೆ ಹಣ ಪಡೆದಿಲ್ಲ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗೂ ನೋಡಲ್ ಅಧಿಕಾರಿ ಪ್ರಶಾಂತ್‌ರವರು ಸ್ವಷ್ಟಪಡಿಸಿದ್ದಾರೆ.

Leave A Reply

Your email address will not be published.

error: Content is protected !!