ಎರಡು ತಿಂಗಳು ಬಂದ್ ಆಗಲಿದೆ ಬಾಳೆಬರೆ ಘಾಟ್ ಸಂಚಾರ ! ಬದಲಿ ಮಾರ್ಗ ಯಾವುದು ಗೊತ್ತಾ ?

ಹೊಸನಗರ: ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿಯ ಬಾಳೆಬರೆ ಘಾಟ್ ನಲ್ಲಿ ಕಾಂಕ್ರಿಟ್ ಪೇವ್ ಮೆಂಟ್ ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆ ಫೆಬ್ರವರಿ 5 ರಿಂದ ಏಪ್ರಿಲ್ 5ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಯಾವೆಲ್ಲ ಬದಲಿ ಮಾರ್ಗ?

ರಾಜ್ಯ ಹೆದ್ದಾರಿ 52ರಲ್ಲಿ ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ ಹೋಗುವ ಲಘು ವಾಹನಗಳು ತೀರ್ಥಹಳ್ಳಿ – ಹಾಲಾಡಿ – ಬಸ್ರೂರು – ಕುಂದಾಪುರ ರಸ್ತೆಗೆ ತಲುಪಬಹುದು. ತೀರ್ಥಹಳ್ಳಿ – ಹೆಬ್ರಿ – ಉಡುಪಿ – ಕುಂದಾಪುರ ರಸ್ತೆಯಲ್ಲಿ ಸಂಚರಿಸಬಹುದು.

ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರಿ ವಾಹನಗಳು ತೀರ್ಥಹಳ್ಳಿ -ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ಮಾರ್ಗದಲ್ಲಿ ಸಂಚರಿಸಬೇಕು.

ಶಿವಮೊಗ್ಗ, ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರ ಕಡೆಗೆ ಹೋಗು ಲಘು ಮತ್ತು ಭಾರಿ ವಾಹನಗಳಿಗು ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಈ ವಾಹನಗಳು ಹೊಸನಗರ – ನಗರ – ಕೊಲ್ಲೂರು ರಸ್ತೆಯಲ್ಲಿ ಸಂಚರಿಸಬೇಕು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,747FollowersFollow
0SubscribersSubscribe
- Advertisement -spot_img

Latest Articles

error: Content is protected !!