ಹೊಸನಗರ: ಪಟ್ಟಣದ ಪಿಡಬ್ಲ್ಯೂಡಿ ಕಛೇರಿಯ ಮುಂಭಾಗ ಜನಾರ್ಧನ ದೇವಸ್ಥಾನದ ಪಕ್ಕದ ನಾಗಶ್ರೀ ಸೇವಾ ಸಮಿತಿಯ ವತಿಯಿಂದ ನಾಗದೇವರ ದೇವಸ್ಥಾನದ ಆವರಣದಲ್ಲಿ ಮಾರ್ಚ್ 16 ಗುರುವಾರ ಬೆಳಿಗ್ಗೆಯಿಂದ 32ನೇ ವರ್ಷದ ವಾರ್ಷಿಕೊತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ನಾಗ ಸೇವಾ ಸಮಿತಿಯವರು ತಿಳಿಸಿದ್ದಾರೆ.
ಮಾರ್ಚ್ 15 ರಂದು ಬುಧವಾರ ಸಂಜೆ 8 ಗಂಟೆಯಿಂದ ದೇವರ ಸನ್ನಿಧಿಯಲ್ಲಿ ರಂಗಪೂಜೆ ಕಾರ್ಯಕ್ರಮ ನಡೆಸಲಾಗುತ್ತಿದ್ದು ಮಾರ್ಚ್ 16 ರಂದು ಗುರುವಾರ ಬೆಳಿಗ್ಗೆ ಸ್ವಾಮಿ ಸನ್ನಿಧಿಯಲ್ಲಿ ಪವಮಾನ, ಮಹಾಪೂಜೆ ಮಧ್ಯಾಹ್ನ 12ಗಂಟೆಗೆ ನವಕುಂಭ ಸ್ನಪನಾದಿ ನವಕ ಪ್ರದಾನ ಹೋಮ, ಕಲಶಾಭಿಷೇಕ, ಮಹಾಪೂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಮಧ್ಯಾಹ್ನ 1ಗಂಟೆಗೆ ಸಾರ್ವಜನಿಕರಿಗೆ ಅನ್ನಪ್ರಸಾದ ಕಾರ್ಯಕ್ರಮ ನಡೆಸಲಾಗುವುದು ನಾಗದೇವರು ಭಕ್ತಾರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ನಾಗಶ್ರೀ ಕಮಿಟಿಯ ಅಧ್ಯಕ್ಷರು ಈ ಮೂಲಕ ಕೇಳಿಕೊಂಡಿದ್ದಾರೆ.