ಮಹಿಳೆಯರನ್ನು ಒಗ್ಗೂಡಿಸುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ ; ಹಿರಿಯ ವ್ಯವಹಾರ ನ್ಯಾಯಾಧೀಶೆ ಪುಷ್ಪಲತಾ ಕೆ


ಹೊಸನಗರ: ಮಹಿಳೆಯರನ್ನು ಒಟ್ಟುಗೂಡಿಸಿಕೊಂಡು ಕಾರ್ಯಕ್ರಮ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಆ ಒಟ್ಟು ಮಾಡುವ ಕೆಲಸ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳು ಮಾಡುತ್ತಿದ್ದು ಈ ಕೆಲಸ ನಿರಂತರವಾಗಿರಲಿ ಎಂದು ಹೊಸನಗರ ಹಿರಿಯ ವ್ಯವಹಾರ ನ್ಯಾಯಾಧೀಶೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಪುಷ್ಪಲತಾ ಕೆಯವರು ಹೇಳಿದರು.


ಹೊಸನಗರದ ಗಾಯಿತ್ರಿ ಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆಸುತ್ತಿರುವ ತಾಲ್ಲೂಕು ಮಹಿಳಾ ವಿಚಾರಗೋಷ್ಠಿ ಹಾಗೂ ಸಾಂಸ್ಕೃತೀಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಮಹಿಳೆಯರು ಪುರುಷರಿಗಿಂತ ಕಡಿಮೆಯಿಲ್ಲ ಎಂಬುದು ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ಉದ್ಯೋಗ, ಶಿಕ್ಷಣ ರಾಜಕೀಯ ಕ್ಷೇತ್ರಗಳಲ್ಲಿ ತನ್ನ ಗಟ್ಟಿತನವನ್ನು ತೋರಿಸಿದ್ದಾರೆ ಗಂಡಸರಂತೆ ಒಂದು ಸಂಸಾರವನ್ನು ನಿಭಾಯಿಸುವ ಶಕ್ತಿ ಈಗ ಮಹಿಳೆಯರಲ್ಲಿದೆ. ಆದರೆ ಅದನ್ನು ದುರುಪಯೋಗ ಮಾಡಿಕೊಳ್ಳದಂತೆ ಕಾರ್ಯ ನಿರ್ವಹಿಸುವುದು ಮಹಿಳೆಯರ ಕೈಯಲ್ಲಿದೆಲ ಮಹಿಳೆಯರು ಒಂದು ಮನೆಯ ದೀಪದಂತೆ. ದೀಪದಂತೆ ಉರಿಯಬೇಕೆ ಹೊರತು ಬೆಂಕಿಯಾಗಬಾರದು ಯಾವ ಸಂಸಾರದಲ್ಲಿ ಅಥವ ಮನೆಯಲ್ಲಿ ಮಹಿಳೆಯರು ತಾಳ್ಮೆಯಿಂದ ಇರುತ್ತಾರೂ ಆ ಮನೆಯಲ್ಲಿ ಎಂದೆಂದಿಗೂ ಸುಖ ಶಾಂತಿ ನೆಮ್ಮದಿಯಿಂದ ಸಂತೋಷದಿಂದ ಇರುತ್ತದೆ ಆದ್ದರಿಂದ ಎಲ್ಲ ಮಹಿಳೆಯರು ಸುಖ-ಶಾಂತಿ ನೆಮ್ಮದಿಯಿಂದ ಬಾಳಿ ಬದುಕಬೇಕಾದರೆ ಮಹಿಳೆಯರ ಪಾತ್ರ ಹಿರಿದಾಗಿರುತ್ತದೆ ಎಂದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೆಶಕರಾದ ಚಂದ್ರಶೇಕರ್‌ರವರು ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮದ ಸಂಪೂರ್ಣ ಮಹತ್ವದ ಕುರಿತು ಮತ್ತು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಅಂಬೇಡ್ಕರ್ ನಿಗಮದ ನಿರ್ದೆಶಕರು ಹಾಗೂ ಜಿಲ್ಲಾ ಜಾಗೃತಿ ಸದಸ್ಯರಾದ ಎನ್ ಆರ್. ದೇವಾನಂದ್‌ರವರು ಮಾತನಾಡಿ ಮಹಿಳೆಯರು ಓದಿನ ಕಡೆಗೆ ಹೆಚ್ಚಿನ ಒಲವು ತೋರಿಸಿದಾದ ಮಾತ್ರ ಈ ಸಮಾಜದಲ್ಲಿ ಗೌರವ ಸ್ಥಾನಮಾನ ಲಭಿಸಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಹೊಸನಗರ ತಾಲ್ಲೂಕು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬೇಬಿ ಕೆ, ಮಹಿಳಾ ಸಿರಿಗನ್ನಡ ವೇದಿಕೆಯ ಅಧ್ಯಕ್ಷೆ ಶಶಿಕಲಾ, ಶಾಖಾ ವ್ಯವಸ್ಥಾಪಕರಾದ ಸುರೇಖಾ ಹಿರೆಮಠ, ಸಂಶೋಧನಾ ತಂತ್ರಜ್ಞಾನ ಮತ್ತು ಭೂಧನ ಸಹಾಯಕಿಯಾದ ಡಾ|| ಸಸೀನಾ ಹೆಚ್.ಕೆ ಹಾಗೂ ಪ್ರಾದೇಶಿಕ ಸಮನ್ವಯಾಧಿಕಾರಿ ಅನುಷಾ, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಮೇಲ್ವಿಚಾರಕರು ಸೇವಾಪ್ರತಿನಿಧಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಂಘದ ಸದಸ್ಯರಿಗಾಗಿ ಪುಷ್ಪಗುಚ್ಛ ಸ್ಪರ್ಧೆ, ಸಾಧಕ ಮಹಿಳೆಯರಿಗೆ ಸನ್ಮಾನ, ರಂಗೋಲಿ ಸ್ಪರ್ಧೆ, ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,747FollowersFollow
0SubscribersSubscribe
- Advertisement -spot_img

Latest Articles

error: Content is protected !!