ಹೊಸನಗರ: ಕರ್ನಾಟಕ ರತ್ನ ಡಾ. ಪುನೀತ್ ರಾಜ್‍ಕುಮಾರ್ ರವರ 48ನೇ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಖಾಸಗಿ ಶಾಲೆಯಾದ ಹೋಲಿ ರೆಡಿಮರ್ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅದ್ದೂರಿಯಾಗಿ ಪುನೀತ್ ಅಭಿಮಾನಿ ಬಳಗ ಪ್ರಶಾಂತ್‌ರವರ ನೇತೃತ್ವದಲ್ಲಿ ಆಚರಿಸಲಾಯಿತು.
ಶಾಲೆಯ ಮಕ್ಕಳಿಗೆ ಸಿಹಿ ಹಂಚುವುದರ ಜೊತೆಗೆ ಪುನೀತ್ ರಾಜ್‍ಕುಮಾರ್ ರವರು ಹಾಕಿಕೊಟ್ಟ ಸಂದೇಶಗಳಾದ ಮತದಾನ ನಮ್ಮ ಹಕ್ಕು ಮರೆಯದೇ ಮತ ಚಲಾಯಿಸೋಣ, ರಾಷ್ಟ್ರೀಯ ಜಂತುಹುಳು ನಿವಾರಣೆಯಲ್ಲಿ ತಾಲ್ಲೂಕಿನ ಪ್ರಾಥಮಿಕ ಶಾಲೆ ಪ್ರೌಢ ಶಾಲೆ ಮಕ್ಕಳಿಗೆ ಮಾತ್ರೆಯನ್ನು 1ವರ್ಷದಿಂದ 19ವರ್ಷ ದವರೆಗಿನ ಎಲ್ಲಾ ಮಕ್ಕಳು ಜಂತುಹುಳು ಮಾತ್ರೆಗಳನ್ನು ಕಡ್ಡಾಯವಾಗಿ ಸೇವಿಸಿ, ಜೀವ ಅಮೂಲ್ಯ ಅತೀ ವೇಗವಾಗಿ ಗಾಡಿ ಚಲಾಯಿಸಬೇಡಿ, ಬೈಕ್‌ನಲ್ಲಿ ಚಲಿಸುವಾಗ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷಾರ್ಥಿಗಳಿಗೆ ಶುಭ ಸಂದೇಶ ಸಾರುವ ಬ್ಯಾನರ್ ಹಿಡಿದ ಮಕ್ಕಳು ಸಾರ್ವಜನಿಕರಿಗೆ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಹೋಲಿ ರೆಡಿಮರ್ ಶಾಲೆಯ ದೈಹಿಕ ಶಿಕ್ಷಕರಾದ ಕಮಲಾಕರ್, ಕನ್ನಡ ಶಿಕ್ಷಕರಾದ ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಬಾಗವಹಿಸಿದ್ದರು.