ಹೊಸನಗರ | ಕರೆಂಟ್ ಕಣ್ಣಾಮುಚ್ಚಾಲೆಯೇ ಡಬಲ್ ಎಂಜಿನ್ ಸರ್ಕಾರದ ಸಾಧನೆ ; ಬೇಳೂರು ಗೋಪಾಲಕೃಷ್ಣ


ಹೊಸನಗರ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಾ ಎಂಟು ವರ್ಷ ಕಳೆದಿದೆ ರಾಜ್ಯದಲ್ಲಿ ಇನ್ನೇರಡು ತಿಂಗಳು ದಾಟಿದರೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತ 5 ವರ್ಷ ಕಳೆಯುತ್ತದೆ ಆದರೆ ನಮ್ಮ ಶಾಸಕರು ನಮ್ಮದು ಡಬಲ್ ಎಂಜಿನ್ ಸರ್ಕಾರ ನಮ್ಮ ಕರ್ನಾಟಕ ರಾಜ್ಯ ಅಭಿವೃದ್ಧಿ ಪಥದತ್ತ ಹೋಗುತ್ತಿದೆ ಕರ್ನಾಟಕದ ಬಗ್ಗೆ ಹೇಳುತ್ತಿದ್ದರೆಯೇ ಹೊರತು ಹೊಸನಗರ ತಾಲ್ಲೂಕು ಅಭಿವೃದ್ಧಿ ಕಾಣಲಿಲ್ಲ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು.


ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಹೊಸನಗರ ಪಟ್ಟಣ ಪಂಚಾಯತಿಗೆ 5ಕೋಟಿ ರೂ. ನೀಡಲಾಗಿದೆ ಎಂದು ಅಭಿವೃದ್ಧಿ ಕೆಲಸ ನೋಡಿದರೇ ಸುಮಾರು ನೂರು ವರ್ಷದ ಗಟ್ಟಿ ಮುಟ್ಟಾಗಿರುವ ಕಲ್ಲು ಚಪ್ಪಡಿಗಳನ್ನು ಕಿತ್ತು ಮೂರು ವರ್ಷವೂ ಬಾರದಂತೆ ಇರುವ ಸಿಮೆಂಟ್ ಚರಂಡಿ ಮಾಡಿಸುತ್ತಿರುವುದು ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುವುದೇ ಒಂದು ಸಾಧನೆಯಾಗಿದೆ. ಈಗ ಬೇಸಿಗೆ ಕಾಲ ನೀರಿನ ಸಮಸ್ಯೆ ಹಳ್ಳಿ-ಹಳ್ಳಿಗಳಲ್ಲಿ ಕಾಣುತ್ತೇವೆ ಎಲ್ಲದಕ್ಕಿಂತಲೂ ಮುಖ್ಯವಾಗಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಈಗ ಪಿಯುಸಿ ಪರೀಕ್ಷೆ ನಡೆಯುತ್ತಿದೆ ಎಸ್.ಎಸ್‌ಎಲ್.ಸಿ ಪರೀಕ್ಷೆಗೆ ಕೇವಲ 15ದಿನಗಳು ಉಳಿದಿದೆ ಆದರೆ ಹೊಸನಗರ ತಾಲ್ಲೂಕಿನಲ್ಲಿ ಹಗಲು ರಾತ್ರಿ ಎನ್ನದೇ ವಿದ್ಯುತ್ ಕಣ್ಣ ಮಚ್ಚಾಲೆ ನಡೆಸುತ್ತಿದೆ 10 ವರ್ಷಗಳಿಂದ ಹೊಸನಗರ ತಾಲ್ಲೂಕಿಗೆ ವಿದ್ಯುತ್ ಕಣ್ಣಾ ಮುಚ್ಚಾಲೆ ನಿಲ್ಲಿಸಲು ಇಲ್ಲಿನ ಶಾಸಕರಿಗೆ ಸಾಧ್ಯವಾಗಿಲ್ಲ ಎಂದರು.

ಕರ್ನಾಟಕ ರಾಜ್ಯ ಅಭಿವೃದ್ಧಿ ಪಥದತ್ತಾ ಎಂದು ಭಾಷಣದಲ್ಲಿ ಹೇಳಿದರೆ ಆಗುವುದಿಲ್ಲ ಅವರ ಕ್ಷೇತ್ರವಾದ ಹೊಸನಗರ ಯಾವ ಮಟ್ಟದಲ್ಲಿದೆ ಎಂದು ತಿಳಿದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಭಿವೃದ್ಧಿ ಪಥದತ್ತಾ ನಾವು ಪ್ರತಿಯೊಬ್ಬರ ಮನೆಗೂ ನೀರು ಕೊಡುತ್ತೇವೆ ರಸ್ತೆ ಮಾಡಿಸಿಕೊಟ್ಟಿದ್ದೇವೆ ಎಂದು ಹೇಳಿದರೇ ಸಾಲದು ಇವರು ರಸ್ತೆ ಮಾಡಿಸಿಕೊಟ್ಟಿದ್ದರೇ ವಸವೆ ಗ್ರಾಮದ ಗ್ರಾಮಸ್ಥರು ಆದುವಳ್ಳಿ ಗ್ರಾಮದ ಗ್ರಾಮಸ್ಥರು ತೊಗರೆ ಗ್ರಾಮದ ಗ್ರಾಮಸ್ಥರು ಹಾಗೂ ಹೊಸನಗರ ಪಟ್ಟಣಕ್ಕೆ ಸಮೀಪವಿರುವ ಗಂಗನಕೊಪ್ಪ ಗ್ರಾಮದ ಗ್ರಾಮಸ್ಥರು ರಸ್ತೆ ಮಾಡಿಕೊಡದಿದ್ದರೇ ವಿಧಾನಸಭೆಯ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಸರ್ಕಾರಕ್ಕೆ ಏಕೆ ಮನವಿ ಪತ್ರ ನೀಡುತ್ತಿದ್ದರು ಬಿಜೆಪಿ ಕಾರ್ಯಕರ್ತರ ಮನೆ ಬಾಗಿಲಿಗೆ ಒಂದೊಂದು ಮನೆಗಳಿಗೆ ಡಾಂಬರ್ ರಸ್ತೆ ಸಿಮೆಂಟ್ ರಸ್ತೆ ಮಾಡಿಕೊಂಡು ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದು ಭಾಷಣ ಮಾಡಿದರೆ ಸಾಲದು ಗ್ರಾಮ –ಗ್ರಾಮಗಳಿಗೆ ಹೋಗಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರೆ ಮಾತ್ರ ಅಭಿವೃದ್ಧಿ ಮಾಡಲು ಸಾದ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊಸನಗರ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,747FollowersFollow
0SubscribersSubscribe
- Advertisement -spot_img

Latest Articles

error: Content is protected !!