ಹೊಸನಗರದ ರಾಧಿಕಾ ರತ್ನಾಕರ್ ಶ್ರೇಷ್ಠಿಯವರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಪ್ರದಾನ
ಹೊಸನಗರ: ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿಯನ್ನು ಹೊಸನಗರದ ರಾಧಿಕಾ ರತ್ನಾಕರ್ ಶ್ರೇಷ್ಠಿಯವರು ಪಡೆದುಕೊಂಡಿದ್ದಾರೆ.
ಇವರು ಸಮಾಜ ಸೇವೆಯಲ್ಲಿ ಗಣನೀಯವಾಗಿ ಪಾಲ್ಗೊಳ್ಳುವುದರ ಜೊತೆಗೆ ಕಲೆ ಮತ್ತು ಸಾಂಸ್ಕೃತೀಕ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಆಸಕ್ತಿ ಹೊಂದಿರುವುದರ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇವರ ಗಣನೀಯ ಸೇವೆಯನ್ನು ಗುರುತಿಸಿ ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್, ಕೆ.ಎಂ.ಪಿ.ಕೆ ಚಾರೀಟೆಬಲ್ ಟ್ರಸ್ಟ್‌ನವರು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ಸಮಾರಂಭವನ್ನು ನಡೆಸಿ ಸುಮಾರು ಸಾವಿರಕ್ಕೂ ಹೆಚ್ಚು ಅರ್ಜಿಗಳಲ್ಲಿ ಹೊಸನಗರದ ರಾಧಿಕಾ ರತ್ನಾಕರ್ ಶ್ರೇಷ್ಠಿಯವರನ್ನು ಗುರುತಿಸಿ ಅದ್ದೂರಿಯಾಗಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸನ್ಮಾನ ಸಮಾರಂಭದಲ್ಲಿ ಬಿಬಿಎಂಪಿ ಮುಖ್ಯಸ್ಥರಾದ ಶಂಕರ್ ಚಲನಚಿತ್ರ ನಟಿಯರಾದ ಭವ್ಯ ಪದ್ಮಾವತಿ, ಕಾರ್ಯಕ್ರಮ ಸಂಘಟಕರಾದ ರೇಖಾ ಶ್ರೀನಿವಾಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.