ಮತದಾನ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ : ರಶ್ಮಿ

0 254

ಹೊಸನಗರ: ಭಾರತ ದೇಶದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಬೇಕು. ಮತದಾನ ಮಾಡುವುದು ಪ್ರತಿಯೊಬ್ಬ ದೇಶದ ಪ್ರಜೆಯ ಆದ್ಯ ಕರ್ತವ್ಯ ಎಂದು ತಿಳಿದು ಮತದಾನ ಮಾಡಿ ಈ ದೇಶದ ಭವಿಷ್ಯವನ್ನು ರೂಪಿಸಿ ಎಂದು ತಹಶೀಲ್ದಾರ್ ರಶ್ಮಿ ಹೇಳಿದರು.

ಹೊಸನಗರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತ್ ಸ್ವೀಪ್ ಸಮಿತಿ, ತಾಲ್ಲೂಕು ಚುನಾವಣೆ ಆಯೋಗ, ಶಿಶು ಅಭಿವೃದ್ಧಿ ಇಲಾಖೆ, ವಿಕಲಚೇತನ ಇಲಾಖೆ ಹಾಗೂ ಅಂಗನವಾಡಿ ಕೇಂದ್ರರವರ ಸಂಯುಕ್ತಾಶ್ರಯದಲ್ಲಿ ಪಟ್ಟಣದಲ್ಲಿ ಒಟ್ಟು 7ಬೂತ್‌ಗಳಿದ್ದು ಎಲ್ಲಾ ಬೂತ್‌ಗಳ ಮುಂಭಾಗ ಧ್ವಜಾರೋಹಣ ಕಾರ್ಯಕ್ರಮ ನೇರವೇರಿಸಿ ಮಾತನಾಡಿದರು.

ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವವನು ಗಟ್ಟಿಗೊಳಿಸಬೇಕಾಗಿದೆ. ಮತದಾನ ಮಾಡುವುದು ನಿಮ್ಮ ಮೂಲಭೂತ ಹಕ್ಕು ಮತ್ತು ಕರ್ತವ್ಯವಾಗಿದೆ. ಮತದಾರ ಜಾಗೃತರಾಗಿ ಮತದಾನ ಮಾಡಿದರೇ ಸದೃಢ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಹುದು ಎಂದರು.

ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್‌ ಈ ಸಂದರ್ಭದಲ್ಲಿ ಮಾತನಾಡಿ, ನೀವು ಮಾಡುವ ಮತದಾನ ಗೌಪ್ಯವಾಗಿರಲಿ. ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಪರಾಧ ಮತ್ತು ಶಿಕ್ಷಾರ್ಹ, ಪ್ರತಿಯೊಬ್ಬರು ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಸಿದ್ದರಾಗಿ ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೇ ನಿರ್ಭಿತಿಯಿಂದ ಮತದಾನ ಮಾಡಬೇಕು. ನೀವು ಮಾಡುವ ಮತದಾನದ ಅಭ್ಯರ್ಥಿಯ ಹೆಸರು ಖಚಿತವಾಗಿ ಇದೆಯೇ ಎಂದು ಗುರುತಿಸಿಕೊಂಡು ಮತದಾನ ಮಾಡಿ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ದೇಶದ ಪ್ರಜಾಸತ್ತಾತ್ಮಕ ಮುಕ್ತ ನ್ಯಾಯಸಮ್ಮತ, ಶಾಂತಿಯುತ ಚುನಾವಣೆಯನ್ನು ಎತ್ತಿ ಚುನಾವಣೆಯಲ್ಲಿ ನಿರ್ಭಿತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಯಾವುದೇ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸಿಬೇಕೆಂದು ಕೇಳಿಕೊಂಡರು.

ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕರಾದ ಕೆ.ಜಿ. ಶಿವಕುಮಾರ್, ಎಸ್.ಆರ್.ಡಬ್ಲ್ಯೂ ರವಿ, ಮಹಾಂತೇಶ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜುನಾಥ್, ಪರಶುರಾಮ, ಬಸವರಾಜ್, ಚಂದ್ರಪ್ಪ, ಯೋಗೇಂದ್ರ, ಅಂಗನವಾಡಿ ಕಾರ್ಯಕರ್ತೆಯಾದ ಸುಜಾತ, ಗೀತಾ ರವಿ, ದೈಹಿಕ ಶಿಕ್ಷಕ ಸುಹಾಸ್, ಚಂದ್ರಕಾ ಮಹೇಶ್, ದಿವ್ಯ ಮಧು, ಸುಗಂದ, ಶ್ರೀಕಾಂತ ಮುಂತಾದವರು ಭಾಗವಹಿಸಿದ್ದರು.

ಮತಗಟ್ಟೆಗಳಿಗೆ ಭೇಟಿ, ಪರೀಶೀಲನೆ
ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿರುವ ಏಳು ಲೋಕಸಭೆಯ ಚುನಾವಣೆ ನಡೆಯುವ ಮತಗಟ್ಟೆಗೆ ತಹಶೀಲ್ದಾರ್ ರಶ್ಮಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಸಿಬ್ಬಂದಿಗಳು ಭೇಟಿ ನೀಡಿ ಮತಗಟ್ಟೆಗಳಲ್ಲಿ ಮೂಲಸೌಲಭ್ಯಗಳು ಫ್ಯಾನ್ ಕರೆಂಟ್ ಹಾಗೂ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೇಯೇ ಎಂದು ಪರಿಶೀಲಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕರಾದ ಶಿವಕುಮಾರ್ ಹಾಗೂ ಅಧಿಕಾರಿಗಳ ವರ್ಗ ಉಪಸ್ಥಿತರಿದ್ದರು.

Leave A Reply

Your email address will not be published.