ಕೇಂದ್ರ ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು ; ಬಿವೈಆರ್

0 317

ರಿಪ್ಪನ್‌ಪೇಟೆ: ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಾ ಬಂದಿದ್ದು ಭಾರತ ದೇಶ ಆಭಿವೃದ್ಧಿಯಿಂದ ಹಿಂದೆ ಉಳಿಯದೇ ಪ್ರಗತಿ ಹೊಂದಬೇಕೆಂಬ ಮೋದಿಜಿಯವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಿ ಅಭಿವೃಧ್ದಿ ಹೊಂದುವಂತಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (B.Y. Raghavendra) ಹೇಳಿದರು.

ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ “ವಿಕಸಿತ ಸಂಕಲ್ಪ ಯಾತ್ರೆ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ಮೂರು ವಿಭಾಗಗಳಾಗಿ ಅದರಲ್ಲಿ ಅಭಿವೃಧ್ದಿ ಹೊಂದಿದ್ದ ಮತ್ತು ಅಭಿವೃದ್ಧಿ ಹೊಂದುತ್ತಿರು ಅಭಿವೃದ್ಧಿ ಹೊಂದದ ಎಂಬ ಮೂರು ವಿಭಾಗಗಲ್ಲಿ ನಮ್ಮ ಭಾರತ ದೇಶ ಅಭಿವೃಧ್ದಿ ಹೊಂದುತ್ತಿರು ದೇಶದ ಪಟ್ಟಿಯಲ್ಲಿದೆ.ಇನ್ನೂ ನಾಲ್ಕು ತಿಂಗಳಲ್ಲಿ 2500 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಉದ್ಘಾಟನೆಗಾಗಿ ಕೇಂದ್ರದ ಸಚಿವರನ್ನು ಆಹ್ವಾಸಲಾಗಿದೆ ಅಲ್ಲದೆ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ 13 ಸಾವಿರ ಕೋಟಿ ರೂ. ಕಾಮಗಾರಿ ಪೂರ್ಣವಾಗಿದ್ದು ಶಿವಮೊಗ್ಗದ ತುಂಗಾ ಸೇತುವೆ ಬಳಿಯಲ್ಲಿ 22 ಕೋಟಿ ರೂ. ವೆಚ್ಚದ ಸೇವೆ ಕಾಮಗಾರಿಯ ಲೋಕಾರ್ಪಣೆ ಸಹ ನಡೆಸಲಾಗುತ್ತಿದ್ದು ಕೇಂದ್ರದ ಮೋದಿ ನೇತೃತ್ವದ ಬಿ.ಜೆ.ಪಿ ಸರ್ಕಾರ ಶ್ರೀಮಂತರಿಗೆ ದೊರೆಯುತ್ತಿದ್ದ ಸೌಲಭ್ಯಗಳು ಬಡವರಿಗೂ ದೊರಕಿಸುವ ಮಹರ್ತ್ಕಾಯದಲ್ಲಿ ಜಾರಿಗೊಳಿಸಲಾದ ಆಯುಷ್ಮಾನ್ ಸೌಲಭ್ಯದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ 2.25 ಲಕ್ಷ ಜನರಿಗೆ 128 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೆರವು ಪಡೆದಿದ್ದಾರೆ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಕಿಸಾನ್ ಸನ್ಮಾನ್, ಪಿಎಂ ಕಿಸಾನ್, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ, ಕೃಷಿ ಸಿಂಚಯ ಯೋಜನೆ, ಪಿಎಂ-ಪ್ರಣಾಮ್, ನಾರಿಶಕ್ತಿ ಮಹಿಳಾ ಸಬಲೀಕರಣ, ಜನೌಷಧಿ, ಉಜ್ವಲ ಯೋಜನೆ ಹೀಗೆ ಜನ್‌ದನ್ ಮುದ್ರಾ ಯೋಜನೆಯಿಂದ ಸಾಕಷ್ಟು ರೈತ ಕುಟುಂಬಗಳು ಸೇರಿದಂತೆ ಕುಲಕಸಬುದಾರರು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರದ ಯೋಜನೆಗಳನ್ನು ಆನುಷ್ಠಾನಗೊಳಿಸಿದೆ ಈ ಕುರಿತು ವಿಕಸಿತ ಸಂಕಲ್ಪ ಕಾರ್ಯಕ್ರಮವನ್ನು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರಚಾರಪಡಿಸಲಾಗುತ್ತಿದೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ಮನೆಮನೆಗೆ ಮುಟ್ಟಿಸುವ ಕೆಲಸ ಮಾಡುವಂತಾಗಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಹರತಾಳು ಹಾಲಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪಿ.ರಮೇಶ್, ಮಂಜುಳಾ ಕೇತಾರ್ಜಿರಾವ್, ಅಶ್ವಿನಿ ರವಿಶಂಕರ್, ವಿನೋಧ ಹಿರಿಯಣ್ಣ, ಜಿ.ಡಿ.ಮಲ್ಲಿಕಾರ್ಜುನ, ಡಿ.ಈ.ಮಧುಸೂದನ್, ದೀಪಾ ಸುಧೀರ್, ಟಿ.ಆರ್.ಕೃಷ್ಣಪ್ಪ, ಸುಂದರೇಶ್, ನಬಾರ್ಡ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಶರತ್, ರಿಪ್ಪನ್‌ಪೇಟೆ ಕೆನರಾಬ್ಯಾಂಕ್ ವ್ಯವಸ್ಥಾಪಕ ದೇವರಾಜ್ ಇನ್ನಿತರರು ಹಾಜರಿದ್ದರು.


ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ಕೆನರಾಬ್ಯಾಂಕ್ ವ್ಯವಸ್ಥಾಪಕ ದೇವರಾಜ್ ಸ್ವಾಗತಿಸಿದರು. ಸುಂದರೇಶ ನಿರೂಪಿಸಿದರು.

Leave A Reply

Your email address will not be published.

error: Content is protected !!