ಶೋರೂಂನಲ್ಲಿ ಅಗ್ನಿ ಅವಘಡ ; 20ಕ್ಕೂ ಹೆಚ್ಚು ಬೈಕ್‌ಗಳಿಗೆ ಹಾನಿ !

0 515

ತೀರ್ಥಹಳ್ಳಿ : ಬೈಕ್ ಶೋರೂಂನಲ್ಲಿ ಆಕಸ್ಮಿಕ ಬೆಂಕಿ (Fire) ತಗುಲಿ ಎರಡು ಬೈಕ್‌ಗಳು (Bikes) ಸುಟ್ಟು ಕರಕಲಾದ ಘಟನೆ ತೀರ್ಥಹಳ್ಳಿಯಲ್ಲಿ (Thirthahalli) ಆಗುಂಬೆ ಬಸ್ ನಿಲ್ದಾಣದ ಬಳಿ ನಡೆದಿದೆ.

ಕಂಡಿಲ್ ಮೋಟಾರ್ಸ್ ನಲ್ಲಿದ್ದ ಎರಡು ಬೈಕ್ ಗಳು ಸುಟ್ಟು ಕರಕಲಾಗಿವೆ. 20ಕ್ಕೂ ಅಧಿಕ ಬೈಕ್‌ಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಭಾನುವಾರವಾಗಿದ್ದರಿಂದ ಶೋರೂಂಗೆ ರಜೆ ಇತ್ತು. ಇನ್ವರ್ಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಒಳಗಿದ್ದ ಕಂಪ್ಯೂಟರ್, ಪೀಠೋಪಕರಣಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಹಾಸ ನಡೆಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!