ಹೃದಯಾಘಾತ ; ಟ್ರಕ್ಕಿಂಗ್ ಬಂದಿದ್ದ ಪ್ರವಾಸಿಗ ಸಾವು..!

0 49

ಚಿಕ್ಕಮಗಳೂರು : ಟ್ರಕ್ಕಿಂಗ್ ಬಂದಿದ್ದ ಪ್ರವಾಸಿಗ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.

ರಕ್ಷಿತ್ (27) ಮೃತಪಟ್ಟ ಯುವಕ. ಮೈಸೂರು ಮೂಲದ 7 ಯುವಕರ ತಂಡ ಟ್ರಕ್ಕಿಂಗ್ ಗೆ ಆಗಮಿಸಿದ್ದರು. ಕುದುರೆಮುಖದಿಂದ-ನೇತ್ರಾವತಿ ಪೀಕ್ ಸ್ಪಾಟ್ ಗೆ ತೆರಳಿದ್ದ ವೇಳೆ ಮಾರ್ಗ ಮಧ್ಯದಲ್ಲಿ ರಕ್ಷಿತ್‌ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಯ ನೇತ್ರಾವತಿ ಪೀಕ್ ಸ್ಪಾಟ್ ನಿಂದ ಮೃತದೇಹವನ್ನ ಪೊಲೀಸರು ಕಳಸಕ್ಕೆ ತಂದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯಾಘಾತ ಸಂಭವಿಸಿದೆ.

Leave A Reply

Your email address will not be published.

error: Content is protected !!