ಈ ಚುನಾವಣೆ ಸವಾಲಾಗಿ ಸ್ವೀಕಾರ ; ಬಿವೈಆರ್

0 291

ರಿಪ್ಪನ್‌ಪೇಟೆ: ಬರುವ ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಲಾಗಿದ್ದು ನಾನು ಮಾಡಿದ ಕಾರ್ಯಗಳು ಮತದಾರರ ಮನಮುಟ್ಟಿವೆ ಎಲ್ಲಾ ಸಮುದಾಯದವರು ಮತದಾರರು ನನಗೆ ಮತ್ತು ಕೇಂದ್ರದ ಮೋದಿಜಿಯವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಂದು ಸಂಸದ ಶಿವಮೊಗ್ಗ ಲೋಕಸಭಾ ಬಿಜೆಪಿ ಆಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಶ್ರೀಶಿವಲಿಂಗೇಶ್ವರ ಬೃಹನ್ಮಠಕ್ಕೆ ಭೇಟಿ ನೀಡಿ ಶಿವಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಶೀರ್ವಾದ ಪಡೆದು ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಪುತ್ರನಿಗೆ ಹಾವೇರಿ ಕ್ಷೇತ್ರದಲ್ಲಿ ಟಿಕೆಟ್ ಸಿಗದೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ದ ಸಲ್ಲದ ಮಾತುಗಳನ್ನಾಡುತ್ತಿರುವ ಈಶ್ವರಪ್ಪನವರು ಹಿರಿಯರು ಅವರ ಬಗ್ಗೆ ನಮಗೆ ಗೌರವವಿದೆ. ಕೇಂದ್ರ ಸಮಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಇದರಲ್ಲಿ ನಮ್ಮ ತಂದೆ ಆಥವಾ ರಾಜ್ಯೈಧ್ಯಕ್ಷರ ಪಾತ್ರ ಏನು ಇಲ್ಲ ಎಂದು ಹೇಳಿ, ಮುಂದಿನ ದಿನಗಳಲ್ಲಿ ಈಶ್ವರಪ್ಪನವರಿಗೆ ಎಲ್ಲವೂ ಆರ್ಥವಾಗುವುದೆಂದು ಹೇಳಿ ಪಾಶ್ಚಾತ್ತಾಪ ಪಡಬೇಕಾದ ದಿನಗಳು ದೂರವಿಲ್ಲ ಚುನಾವಣೆಯೇ ಉತ್ತರಿಸಲಿದೆ ಎಂದರು.

ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಸಮರ್ಥವಾಗಿ ಎದುರಿಸುವುದರೊಂದಿಗೆ ಕಳೆದ ಬಾರಿಗಿಂತ ಅಧಿಕ ಮತಗಳ ಅಂತರದಲ್ಲಿ ಗೆಲುವ ಬಗ್ಗೆ ವಾತಾವರಣ ಚೆನ್ನಾಗಿದೆ ಎಂಬುದಕ್ಕೆ ನಾನು ಹೋದ ಕಡೆಯಲ್ಲಿ ಸಣ್ಣ ಸಮುದಾಯದವರಿಂದ ಹಿಡಿದು ಇತರ ಎಲ್ಲ ಸಮುದಾಯದವರು ಹೆಚ್ಚು ಬೆಂಬಲಿಸುತ್ತಿದ್ದಾರೆಂದು ಹೇಳುವುದರೊಂದಿಗೆ, ಈ ಬಾರಿಯ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಈಜಿ ದಂಡ ಸೇರಿಸುವ ಕಾರ್ಯದಲ್ಲಿ ಕಾರ್ಯಕರ್ತರ ತಂಡ ಸಿದ್ದವಾಗಿದೆ ಎಂದರು.

ಈ ಸಂದರ್ಭದಲ್ಲಿ ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕ ಆರಗ ಜ್ಞಾನೇಂದ್ರ, ಕೆ.ಆರ್.ಪ್ರಕಾಶ್, ಶಂಕರಯ್ಯ ಶಾಸ್ತ್ರಿಗಳು ಹಾದಿಗಲ್ಲು, ಬಿಜೆಪಿ ಮುಖಂಡರಾದ ನವೀನ್, ಕುಕ್ಕೆ ಪ್ರಶಾಂತ, ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜಗೌಡ, ವೀರೇಶ್‌ ಆಲವಳ್ಳಿ, ಮಸರೂರು ಶಾಂತವೀರಪ್ಪಗೌಡ, ಹೆಚ್.ಎಂ.ವರ್ತೇಶ್, ನಾಗಾಭೂಷಣ ಬೆಳಂದೂರು, ಸ್ವಾಮಿಗೌಡ ನೆವಟೂರು, ಕಮದೂರು ರಾಜಶೇಖರ, ಪರಮೇಶ ಕಮದೂರು, ಶಾಂತಕುಮಾರ ಜಂಬಳ್ಳಿ, ಅಬ್ಬಿ ಬಿ.ಈ.ಕಿರಣ ಬೇಹಳ್ಳಿ, ಶ್ರೀದೇವಿ ಕಿರಣ್, ರಾಜು ಕೋಣಂದೂರು, ಶಶಿಕುಮಾರ ಕೋಟೆಗದ್ದೆ, ರವಿ ಬಾಳೂರು, ದೊರೆಸ್ವಾಮಿ ಹುಳಗದ್ದೆ, ಗುರುಪಾದಪ್ಪ ಅಮೃತ ಇನ್ನಿತರರು, ಬಿಜೆಪಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!