ಬಿಜೆಪಿ ಪಕ್ಷದಲ್ಲಿ ಶುದ್ಧಿಕರಣದ ಅವಶ್ಯಕತೆಯಿದೆ ; ವಾಟಗೋಡು ಸುರೇಶ್

0 580

ಹೊಸನಗರ: ರಾಜ್ಯ ಬಿಜೆಪಿ ಪಕ್ಷದಲ್ಲಿ ಶುದ್ಧಿಕರಣದ ಅವಶ್ಯಕತೆಯಿದೆ ಎಂದು ಜಿಲ್ಲಾ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್‌ ಅಭಿಪ್ರಾಯಪಟ್ಟರು.

ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಸುಮಾರು 12 ವರ್ಷಗಳ ಹಿಂದೆಯೇ ಕಟ್ಟ ಬಿಜೆಪಿ ಕಾರ್ಯಕರ್ತರನ್ನು ರಾಜ್ಯ ನಾಯಕರನ್ನು ಹಿಂದುತ್ವವಾದಿಗಳನ್ನು ತುಳಿಯುವ ಪ್ರಯತ್ನ ನಡೆದಿದ್ದು ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದರೂ ನನ್ನನೂ ತುಳಿದಿರುವುದರಿಂದ ನಾನು ಬಿಜೆಪಿ ಪಕ್ಷ ತೊರೆದಿದ್ದೇನೆ. ಅದೇ ರೀತಿ ಕೆ.ಎಸ್ ಈಶ್ವರಪ್ಪನವರು 4 ದಶಕಗಳೊಂದಿಗೆ ಬಿಜೆಪಿ ಪಕ್ಷದಲ್ಲಿ ಹಿಂದುತ್ವಕ್ಕಾಗಿ ಆರ್‌ಎಸ್‌ಎಸ್‌ನಲ್ಲಿ ಸಾಕಷ್ಟು ದುಡಿದಿದ್ದರೂ ಅವರಿಗೆ ಬಿಜೆಪಿಯಲ್ಲಿ ಸರಿಯಾದ ಸ್ಥಾನಮಾನ ನೀಡದೇ ಇರುವುದು ನೋಡಿದರೇ ಬಿಜೆಪಿ ಹೈಕಮಂಡ್ ಇಲ್ಲಿನ ಒಬ್ಬ ನಾಯಕರ ಮಾತಿಗೆ ಮಣೆ ಹಾಕಿದಂತೆ ಕಾಣುತ್ತಿದೆ ಕೇಂದ್ರ ನಾಯಕರು ರಾಜ್ಯದಲ್ಲಿ ನಡೆಸುತ್ತಿರುವ ವಂಶ ಪರಂಪರೆ ರಾಜಕೀಯ ಜವಾಬ್ದಾರಿಯನ್ನು ನಮ್ಮ ಕುಟುಂಬ ವರ್ಗಕ್ಕೆ ಸೀಮಿತ ಎಂದು ರಾಜ್ಯಬಾರ ಮಡುತ್ತಿರುವುದು ರಾಷ್ಟ್ರ ನಾಯಕರ ಗಮನಕ್ಕೆ ಇಲ್ಲವೇ? ಇದೇ ರೀತಿ ಮುಂದುವರೆದರೆ ಮುಂದಿನ ದಿನದಲ್ಲಿ ರಾಜ್ಯದಲ್ಲಿ ಬಿಜೆಪಿ ಯಾವ ಮಟ್ಟದಲ್ಲಿ ಇರುತ್ತದೆ ಎಂಬುವುದು ಹೈಕಮಾಂಡ್‌ಗೆ ತಿಳಿಯುತ್ತದೆ. ಬಿಜೆಪಿಯಲ್ಲಿ ಒಬ್ಬರಿಗೆ ಮಣೆ ಹಾಕಿದರೆ ಕರ್ನಾಟಕದಲ್ಲಿ ಬಿಜೆಪಿ ಮಟ್ಟ ತಳಪಾಯಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ ಎಂದರು.

ನನ್ನ ಬೆಂಬಲ ಕೆ.ಎಸ್ ಈಶ್ವರಪ್ಪನವರಿಗೆ:
ಕೆ.ಎಸ್ ಈಶ್ವರಪ್ಪನವರು ಬಂಡಾಯವಾಗಿ ಲೋಕಸಭೆಯ ಚುನಾವಣೆಗೆ ಧುಮುಕಿದ್ದೂ ನಮ್ಮ ತಾಲ್ಲೂಕಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಬಂಡಾಯ ಕಾರ್ಯಕರ್ತರು ಒಂದೆರಡು ದಿನದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪನವರ ಬೆಂಬಲಕ್ಕಾಗಿ ನಿಲ್ಲಲಿದ್ದು ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪನವರ ಬೆಂಬಲಕ್ಕೆ ನಿಲ್ಲಲಿದ್ದೂ ನನ್ನ ನಾಯಕತ್ವದಲ್ಲಿ ಸಾಕಷ್ಟು ಕಾರ್ಯಕರ್ತರೊಂದಿಗೆ ಚುನಾವಣೆಯ ಪ್ರಚಾರಕ್ಕೆ ಹೋಗಲಿದ್ದೇವೆ ಎಂದರು.

Leave A Reply

Your email address will not be published.

error: Content is protected !!