ಕಾರಣಗಿರಿಯಲ್ಲಿ ವೈಭವದ ಪ್ರತಿಷ್ಠಾ ಮಹೋತ್ಸವಕ್ಕೆ ತೆರೆ

0 565

ಹೊಸನಗರ : ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ನವೀಕೃತ ಗರ್ಭಗುಡಿಯ ಉದ್ಘಾಟನೆ ಮತ್ತು ಪುನಃಪ್ರತಿಷ್ಠಾ, ಬ್ರಹ್ಮಕಲಶ ಕಾರ್ಯಕ್ರಮಗಳು ವೈಭವದಿಂದ ನಡೆಯಿತು.

8 ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿದಿನ ಗಣಹೋಮ, ವೇದಪಾರಾಯಣ, ಗಣೇಶ ಪುರಾಣ ಪಾರಾಯಣಗಳು ನಡೆದವು. ಇದಲ್ಲದೆ ಅಧ್ಬುತ ಶಾಂತಿ ಹವನ, ಅಘೋರಾಸ್ತ್ರಜಪ ಹವನ, ತತ್ವಹವನ, ತತ್ವಕಲಶಾಭಿಷೇಕ, ಆಲಯರಾಕ್ಷೆೋಘ್ನ ಹವನ, ಪ್ರಾಯಶ್ಚಿತ ಹೋಮ.ಅಧಿವಾಸ ಹವನಗಳು ನಡೆದವು.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಜೀವಕುಂಭಾಭಿಷೇಕ ಪೂರ್ವಕ ಶ್ರೀದೇವರ ಪ್ರತಿಷ್ಠೆ ಮತ್ತು ಶಿಖರ ಪ್ರತಿಷ್ಠೆಯನ್ನು ನೆರವೇರಿಸಿದರು.

1009 ಬ್ರಹ್ಮಕಲಶಾಭಿಷೇಕ ನಡೆದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಬ್ರಹ್ಮಕಲಶಾಭಿಷೇಕ ನೆರವೇರಿಸಿದರು. ಶಿಖರಕ್ಕೂ ಕಲಶಾಭಿಷೇಕ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಶೃಂಗೇರಿ ಜಗದ್ಗುರುಗಳ ಸಾನಿಧ್ಯದಲ್ಲಿ ಅರ್ಚಕ ಗಜಾನನ ಭಟ್ಟರನ್ನು ಸನ್ಮಾನಿಸಲಾಯಿತು.
ಕೇವಲ ಎರಡು ತಿಂಗಳುಗಳಲ್ಲಿ ಗರ್ಭಗುಡಿಯನ್ನು ಅಧ್ಬುತವಾಗಿ ನಿರ್ಮಿಸಿದ ಶಿಲ್ಪಿ ರಾಘವೇಂದ್ರ ಆಚಾರ್ ಹಾಗೂ ಶಂಕರ ಆಚಾರ್‌ರನ್ನು ಗೌರವಿಸಲಾಯಿತು.

ಇದೇ ಸಂದರ್ಭ ರಜತ ರಥೋತ್ಸವವೂ ನೆರವೇರಿದ್ದು ತಾಂತ್ರಿಕರಾದ ಶ್ರೀ ಸಮರ್ಥ ಭಟ್ಟರು ಹಾಗೂ ಸೂರ್ಯನಾರಾಯಣ ಭಟ್ಟರ ನೇತೃತ್ವದಲ್ಲಿ 8 ದಿನಗಳ ಕಾರ್ಯಕ್ರಮ ನಡೆದು ಪೂರ್ಣಾಹುತಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಂದ್ರರಾವ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹೈಕೋರ್ಟ್ ನ್ಯಾಯವಾದಿ ಸೂರೆಘಟ್ಟ ಗಂಗಾಧರ ಐತಾಳ್, ಅಧ್ಯಕ್ಷ ವಾಸುದೇವ ಉಡುಪ, ಕಾರ್ಯಾಧ್ಯಕ್ಷ ಗುರುಶಕ್ತಿ ಪ್ರಭಾಕರ್, ಕಾರ್ಯದರ್ಶಿ ಹನಿಯ ರವಿ ಮುಂತಾದವರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!