ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವಾಗ ಅಪಘಾತ ; ಪತ್ನಿ ಸಾವು, ಪತಿ ಸ್ಥಿತಿ ಗಂಭೀರ

0 603

ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿದ ಜೀಪ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಪ್‍ನಲ್ಲಿದ್ದ ದಂಪತಿ ಪೈಕಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕಳವಾಸೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮೃತರನ್ನು ಕಳವಾಸೆ ಗ್ರಾಮದ ನಿವಾಸಿ ಮೀನಾಕ್ಷಿ (60) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೀನಾಕ್ಷಿ ಪತಿ ಅಪ್ಪುಸ್ವಾಮಿಗೌಡ ಅವರನ್ನು ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ 7 ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಕಾಫಿ ಬೆಳೆಗಾರರಾದ ಅಪ್ಪುಸ್ವಾಮಿಗೌಡ ಅವರು ಜ್ವರದಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ಹೋಗಲೆಂದು ಚಿಕ್ಕಮಗಳೂರು ಕಡೆಗೆ ಜೀಪಿನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಪ್ಪುಸ್ವಾಮಿಗೌಡ ಅವರೇ ಜೀಪು ಚಲಾಯಿಸುತ್ತಿದ್ದರು. ಸಿರವಾಸೆ ಗ್ರಾಮದ ಸಮೀಪ ಬರುವಾಗ ಜೀಪು ನಿಯಂತ್ರಣ ಕಳೆದುಕೊಂಡು ಮರವೊಂದಕ್ಕೆ ಗುದ್ದಿ ಉರುಳಿ ಬಿದ್ದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಂಪತಿಗಳನ್ನು ಚಿಕ್ಕಮಗಳೂರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಪತ್ನಿ ಮೀನಾಕ್ಷಿಯವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಜೀಪು ಚಲಾಯಿಸುತ್ತಿದ್ದ ಪತಿ ಅಪ್ಪುಸ್ವಾಮಿಗೌಡ ಅವರ ತಲೆ ಮತ್ತು ಕಾಲಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Leave A Reply

Your email address will not be published.

error: Content is protected !!