ಲಾಡ್ಜ್’ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿ ಶವ ಪತ್ತೆ !

0 1,330

ತೀರ್ಥಹಳ್ಳಿ : ಹಣಗರೆಕಟ್ಟೆಯ ಪ್ರಸಿದ್ಧ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಾಲಯದ ಖಾಸಗಿ ಲಾಡ್ಜ್ ನಲ್ಲಿ 30 ವರ್ಷದ ಮಹಿಳೆಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕತ್ತು ಸೀಳಿ ಕೊಲೆ ಮಾಡಲಾಗಿದೆ.

ಲಾಡ್ಜ್ ನಂತೆ ಇರುವ ಮನೆಯಲ್ಲಿ 10 ರೂಮ್ ಗಳಿದ್ದು ಅದರಲ್ಲಿ ಸೋಮವಾರ ರಾತ್ರಿ ಬೈಕ್ ನಲ್ಲಿ ಬಂದಿದ್ದ ಯುವಕ ಹಾಗೂ ಯುವತಿ ಬಂದು ಕೇಳಿದಾಗ ಬಾಡಿಗೆಗೆ ರೂಮನ್ನು ನೀಡಲಾಗಿದೆ. ಎಂದು ಲಾಡ್ಜ್ ಕೆಲಸದವರು ತಿಳಿಸಿದ್ದಾರೆ.

ವಾಪಾಸ್ ಆಗುವಾಗ ಆ ವ್ಯಕ್ತಿ ಮಾತ್ರ ಹೋಗಿದ್ದಾನೆ. ಬುಧವಾರ ಸಂಜೆ ಕೆಲಸದವರು ನೋಡುವಾಗ ಹತ್ಯೆಯಾಗಿರುವುದು ತಿಳಿದು ಬಂದಿದೆ. ರೂಮನ್ನು ನೀಡುವಾಗ ಯಾವುದೇ ರೀತಿ ಸಂಬಂಧಪಟ್ಟ ದಾಖಲೆ ತೆಗೆದುಕೊಂಡಿಲ್ಲ ಎಂದು ಪೋಲೀಸರ ಬಳಿ ಕೆಲಸದವರು ಹೇಳಿದ್ದಾರೆ.

ತೀರ್ಥಹಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಳೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಮಿಥುನ್ ಕುಮಾರ್, ಹಣಗೆರೆಕಟ್ಟೆಯಲ್ಲಿ ಶವ ಪತ್ತೆಯಾಗಿದೆ. ಸುಮಾರು 30 ವರ್ಷದ ಮಹಿಳಾ ಪ್ರವಾಸಿಯಾಗಿದ್ದಾಳೆ. ಹೆಸರು ಮತ್ತು ಕೊಲೆಯಾಗಿರುವ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!