ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಅನಿಲ್ ಕುಮಾರ್ ತಡಕಲ್ ನೇಮಕ

0 489

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಉಸ್ತುವಾರಿಯನ್ನಾಗಿ ಕೆಪಿಸಿಸಿ ವಕ್ತಾರ ಹಾಗೂ ಮಾಧ್ಯಮ, ಸಂಯೋಜನೆ ವಿಭಾಗದ ಉಪಾಧ್ಯಕ್ಷ ಅನಿಲ್ ಕುಮಾರ್ ತಡಕಲ್ ನೇಮಕ ಮಾಡಲಾಗಿದೆ.

ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದು,ಮೇ 07ರಂದು ಚುನಾವಣೆ ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಸಹಕಾರಿಯಾಗಲು ಈ ಕೆಳಕಂಡ ಮುಖಂಡರುಗಳನ್ನು ಚುನಾವಣಾ ಪ್ರಚಾರ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದಿದ್ದಾರೆ.

ಅನಿಲ್ ಕುಮಾರ್ ತಡಕಲ್, ಕೆಪಿಸಿಸಿ ವಕ್ತಾರರು ಹಾಗೂ ಉಪಾಧ್ಯಕ್ಷರು, ಮಾಧ್ಯಮ, ಸಂಯೋಜನೆ ವಿಭಾಗ, ಕೆಪಿಸಿಸಿ – ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ.

ಜಿಎ ಬಾವ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ – ಬೈಂದೂರು ವಿಧಾನಸಭಾ ಉಸ್ತುವಾರಿ

ಲಕ್ಷ್ಮೀ ವೆಂಕಟೇಶ್, ಅಧ್ಯಕ್ಷರು, ಇಂಟಕ್, ಕೆಪಿಸಿಸಿ – ಶಿವಮೊಗ್ಗ ನಗರ ವಿಧಾನಸಭೆ ಉಸ್ತುವಾರಿ.

Leave A Reply

Your email address will not be published.

error: Content is protected !!