ಶಿವಮೊಗ್ಗ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿ ರಿಪ್ಪನ್‌ಪೇಟೆ ಜಿ.ಎಸ್.ವರದರಾಜ್ ನೇಮಕ

0 254

ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿ ರಿಪ್ಪನ್‌ಪೇಟೆಯ ಜಿ.ಎಸ್.ವರದರಾಜ್ ರವರನ್ನು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಆಧ್ಯಕ್ಷ ಡಾ.ಕಡಿದಾಳ್ ಗೋಪಾಲ್ ನೇಮಕ ಮಾಡಿದ್ದಾರೆ.

ಡಾ.ಶಿವಕುಮಾರ ಮಹಾಸ್ವಾಮಿಜಿಯವರ 117ನೇ ಜನ್ಮದಿನಾಚರಣೆ

ರಿಪ್ಪನ್‌ಪೇಟೆ: ಏಪ್ರಿಲ್ 1 ರಂದು ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳ ಭಕ್ತವೃಂದದವರು ಶತಾಯುಷಿ, ಕಾಯಕಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೆ ಪ್ರಖ್ಯಾತರಾದ ಲಿಂ‌ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಜಿಯವರ 117ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದೆಂದು ಡಾ.ಶಿವಕುಮಾರ ಮಹಾಸ್ವಾಮಿಗಳ ಭಕ್ತವೃಂದದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸಿ ಆಶೀರ್ವಚನ ನೀಡುವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಿ.ಆರ್.ಪಿ.ಎಫ್. (ದೇಶ ಸೇವೆ) ಪದ್ಮಾವತಿ ಕುಮಾರ್, ಶ್ರೀ ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ (ಸಮಾಜ ಸೇವೆ) ಜಿ.ಎಂ.ದುಂಡುರಾಜಪ್ಪಗೌಡ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಎನ್.ರಾಮಚಂದ್ರರಾವ್,
ಸಮಾಜ ಸೇವೆ ಫ್ರಾನ್ಸಿಸ್ ಡಿಸೋಜ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು.

Leave A Reply

Your email address will not be published.

error: Content is protected !!